ಪ್ರತಿಭೆ ಅನಾವರಣಕ್ಕೆ ಕಲಿಕಾ ಹಬ್ಬ ವೇದಿಕೆ

A learning festival platform to showcase talent
ತೇರದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸಿಆರ್‌ಪಿ ಎ.ಆರ್.ಮುಧೋಳ, ಬಿ.ಎಂ.ಹಳೇಮನಿ, ಶಿಲ್ಪಾ ರೋಡಕರ, ಎಂ.ಎಂ. ಗುಂಜಟ್ಟಿ ಉದ್ಘಾಟಿಸಿದರು. ಎಂ.ಕೆ. ಮೇಗಾಡಿ, ಮಹೇಶ ಸೋರಗಾಂವಿ, ಎಸ್.ಬಿ. ಮೋಮಿನ್ ಮತ್ತಿತರರಿದ್ದಾರೆ.
Published on

ತೇರದಾಳ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಕ್ಕೆ ಕಲಿಕಾ ಹಬ್ಬ ವೇದಿಕೆಯಾಗಿದೆ ಎಂದು ಪಶ್ಚಿಮ ವಲಯ ಸಿಆರ್‌ಪಿ ಎ.ಆರ್. ಮುಧೋಳ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 1ರಿಂದ 5ನೇ ತರಗತಿ ಮಕ್ಕಳಲ್ಲಿ ಕ್ಲಸ್ಟರ್ ಮಟ್ಟದ ಎಫ್​ಎಲ್‌ಎನ್ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆ ವ್ಯಕ್ತಿತ್ವ ನಿರ್ಮಾಣದ ಮೆಟ್ಟಿಲುಗಳಾಗಿದ್ದು, ಶಿಕ್ಷಣದತ್ತ ಮಗುವನ್ನು ಆಕರ್ಷಿಸಲು ನೆರವಾಗುತ್ತವೆ. ಕಠಿಣ ಆರ್ಥಿಕ ಸ್ಥಿತಿ ನಡುವೆಯೂ ಅನೇಕ ಸಾಧಕರು ಸಾಧನೆಯ ಪರಾಕಾಷ್ಠೆ ಮೆರೆದಿರುವುದನ್ನು ಪ್ರೇರಣೆಯಾಗಿಸಿಕೊಂಡು ಮಕ್ಕಳು ಸರ್ಕಾರದ ಸೌಲಭ್ಯ ಪಡೆದು ದೇಶದ ಆಸ್ತಿಯಾಗಿ ಬೆಳೆಯಬೇಕು ಎಂದರು.

ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ ಮಾತನಾಡಿ, ಚಟುವಟಿಕೆ ಆಧಾರಿತ ಶಿಕ್ಷಣದಿಂದ ಮಕ್ಕಳಲ್ಲಿ ಸೃಜನತೆ ಮತ್ತು ಚುರುಕುತನ ಬೆಳೆಸಲು ಸಹಕಾರಿಯಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ ಮಾತನಾಡಿ, ಬಡತನ ಶಿಕ್ಷಣ ಕಲಿಕೆಗೆ ಮುಳುವಾಗದು. ಮನಸ್ಸಿದ್ದರೆ ಖಂಡಿತ ಮಾರ್ಗವಿರುತ್ತದೆ ಎಂದರು.

ಪುರಸಭೆ ಉಪಾಧ್ಯಕ್ಷೆ ನಸ್ರೀನ್ ಬಾನು ನಗಾರ್ಜಿ, ಎಸ್‌ಡಿಎಂಸಿ ಅಧ್ಯಕ್ಷ ಮಹಾವೀರ ನಂದಗಾಂವ, ತೇರದಾಳ ಎಎಸ್‌ಐ ಎಂ.ಎಂ. ಗುಂಜಟ್ಟಿ, ಎಂ.ಕೆ. ಮೇಗಾಡಿ, ಪೂರ್ವ ಸಿಆರ್‌ಪಿ ಮಹೇಶ ಸೋರಗಾಂವಿ, ಎಸ್.ಬಿ. ಮೋಮಿನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net