

ದೇವರಹಿಪ್ಪರಗಿ: ಕನ್ನಡದ ಪ್ರಥಮ ಮಹಿಳಾ ಕವಯಿತ್ರಿಯಾಗಿ, ವಚನ ಸಾಹಿತ್ಯಕ್ಕೆ ತನ್ನದೇಯಾದ ಕೊಡುಗೆ ನೀಡಿದ ಶಿವಶರಣೆ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಬಸವ ಶರಣ ಸಂಗಮ ಸಮಿತಿ ಅಧ್ಯ ಸಂಗಣ್ಣ ತಡವಲ್ ಹೇಳಿದರು.
ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬಸವಶರಣ ಸಂಗಮ ಸಮಿತಿ ಅಡಿಯಲ್ಲಿ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಚೈತ್ರ ಮಾಸದ ಚಿತ್ತಾ ನತ್ರದ ದವನದ ಹುಣ್ಣಿಮೆಯ ದಿನ ಶಿವಶರಣೆ ಅಕ್ಕಮಹಾದೇವಿ ಮಹಾಮಾತೆ ಜನಿಸಿದರು. ಶರಣ ಚಳವಳಿಯ ಮುಂಚೂಣಿಯಲ್ಲಿ ಕಲ್ಯಾಣ ಕ್ರಾಂತಿಯ ಜತೆಗೆ ಇಡೀ ತಮ್ಮ ಬದುಕನ್ನು ಹೋರಾಟದಲ್ಲಿ ಕೊನೆಗಾಣಿಸಿದವರು. ಅವರ ಜೀವನ, ಸಾಧನೆ, ರಚಿಸಿದ ವಚನಗಳ ಸಾರವನ್ನು ನಾವು ಅರಿತು ಮುನ್ನಡೆಯೋಣ ಎಂದರು.
ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯ ಜೆ.ಆರ್.ಬಿರಾದಾರ, ಕಸಾಪ ತಾಲೂಕು ಅಧ್ಯ ಜಿ.ಪಿ.ಬಿರಾದಾರ, ಕೆ.ಎಂ.ನಂದಿ, ಗೋಲ್ಲಾಳ ಬಿರಾದಾರ, ನಿಂಗು ಜಡಗೊಂಡ, ಮಲ್ಲು ಹಳಿಮನಿ, ಕಾಶೀನಾಥ ರಾಮಗೊಂಡ, ಕಾಸಪ್ಪ ಕುಂಬಾರ, ಹನುಮೇಶ ನಂದ್ಯಾಳ ಇತರರಿದ್ದರು.