

ವಿಜಯಪುರ : ಸದ್ಯ ನಾವೆಲ್ಲರೂ ಬಳಸುವ ಡಿಜಿಟಲ್ ಇಂಡಿಯಾ ಕನಸಿಗೆ ಮುನ್ನುಡಿ ಬರೆದವರು ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ದಿ. ರಾಜೀವ ಗಾಂಧಿ ಪುಣ್ಯತಿಥಿ ಸ್ಮರಣೆ ಕಾರ್ಯಾಕ್ರಮದಲ್ಲಿ ಮಾತನಾಡಿದ ಅವರು, ರಾಜೀವಗಾಂಧಿ ದೇಶದ ಸಮಗ್ರತೆಗಾಗಿ ತ್ಯಾಗ ಬಲಿದಾನ ಮಾಡಿದ ಅಪ್ರತಿಮ ನಾಯಕ ಎಂದರು.
ನಾಗಠಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಹಜಾನ ಮುಲ್ಲಾ, ರಾಜೇಶ್ವರಿ ಚೊಳಕೆ, ಕಾಶೀಬಾಯಿ ಹಡಪದ, ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಸಲೀಮ ಪೀರಜಾದೆ, ಮಹ್ಮದ ಮುಲ್ಲಾ, ಸಂತೋಷ ಬಾಲಗಾಂವಿ, ಸರಫರಾಜ ಮಿರ್ದೆ, ಕೆ.ಎಸ್. ಪರಶೆಟ್ಟಿ, ಸಂತೋಷ ಪವಾರ, ಹರೀಶ ಕೌಲಗಿ, ಫಿರೋಜ ಶೇಖ, ಬಾಬಾಜಾನ ಬಾಗವಾನ ಮತ್ತಿತರರಿದ್ದರು.