12 ದಿನದಲ್ಲಿ ಹಸೆಮಣೆ ಏರಬೇಕಿದ್ದ ವಕೀಲ ದುರಂತ ಸಾವು! ಅಜ್ಜಿಯನ್ನ ಮದ್ವೆಗೆ ಕರೆಯಲು ಹೋದವ ಶವವಾಗಿ ಬಂದ...

accident death
Published on

ಕೊಡಗು: ಇನ್ನು 12 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವ ವಕೀಲ ದುರಂತ ಅಂತ್ಯಕಂಡಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

ಮೈಸೂರು ನಗರದ ಗಾಂಧಿನಗರ ನಿವಾಸಿ ಜಯಲಕ್ಷ್ಮೀ ಮತ್ತು ಸುಬ್ರಹ್ಮಣಿಸ್ವಾಮಿ ದಂಪತಿ ಪುತ್ರ ವಿಶ್ವನಾಥ್(29)​ ಮೃತ ದುರ್ದೈವಿ. ಈತ ಮೈಸೂರಿನಲ್ಲಿ ವಕೀಲಿ ವೃತ್ತಿ ತರಬೇತಿ ಪಡೆಯುತ್ತಿದ್ದ. ಬೆಂಗಳೂರಿನ ಬಾಣಸವಾಡಿಯ ಯುವತಿ ಜತೆ ವಿಶ್ವನಾಥ್​ ಮದುವೆ ನಿಶ್ಚಯವಾಗಿತ್ತು. ಸೆ.19ರಂದು ನಡೆಯಬೇಕಿದ್ದ ಮದವೆಯ ಆಹ್ವಾನ ಪತ್ರಿಕೆಯನ್ನು ಬಹುತೇಕ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಲಾಗಿತ್ತು. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿದ್ದ ತನ್ನ ಅಜ್ಜಿಗೂ ಆಹ್ವಾನ ಪತ್ರಿಕೆ ಕೊಡಲು ಬಂದ ವಿಶ್ವನಾಥ್ ​ ಮತ್ತು ಇವರ ಜತೆ ಬೆಟ್ಟದಪುರದ ದಿನೇಶ್​ ಮೇಲೆ ಲಾರಿ ರೂಪದಲ್ಲಿ ಬಂದ ಜವರಾಯ ಇಬ್ಬರ ಪ್ರಾಣವನ್ನೂ ಹೊತ್ತೊಯ್ದಿದ್ದಾನೆ.

ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ವಿಶ್ವನಾಥ್​ ಮತ್ತು ದಿನೇಶ್​ ಇಬ್ಬರ ಮೇಲೂ ಮಡಿಕೇರಿಯ ಚೈನ್‌ಗೇಟ್ ಬಳಿ ಲಾರಿ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂತಹ ಭೀಕರ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net