ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ

h25-unakal
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್‌ನ ಸಿದ್ದಕಲ್ಯಾಣ ನಗರದ ಜ್ಞಾನದ ಶಿಕ್ಷಣ ಸಂಸ್ಥೆಯ ತಕ್ಷ ಪ್ರಿ ಶಾಲೆಯಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗಂಡು ಮಕ್ಕಳು ಶ್ರೀಕೃಷ್ಣನ ವೇಷ ಧರಿಸಿದ್ದರೆ, ಹೆಣ್ಣು ಮಕ್ಕಳು ರಾಧೆ ದಿರಿಸು ಧರಿಸಿ ಗಮನ ಸೆಳೆದರು. ಶ್ರೀಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗಲಾಯಿತು. ಮುಖ್ಯ ಶಿಕ್ಷಕಿ ಅಪರ್ಣಾ ಕೊಹ್ಲಿ, ಶಿಕ್ಷಕಿಯರಾದ ಸಾವಿತ್ರಿ ಕೋರಿಕಪ್ಪ, ಶ್ರೀದೇವಿ ಸುಗಂಧಿ, ಗಾಯತ್ರಿ, ಕಾವ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net