ಆನೆಗುಡ್ಡೆ ದೇಗುಲದಲ್ಲಿ ಭಕ್ತರ ಮಹಾಪೂರ

angudde
Published on

ಕೋಟ: ಪುರಾಣ ಪ್ರಸಿದ್ಧ ಕ್ಷೇತ್ರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರಕ ಸಂಕಷ್ಟ ಚೌತಿ ಹಿನ್ನೆಲೆಯಲ್ಲಿ ಭಕ್ತ ಸಂದಣಿ ಕಂಡುಬಂತು. ಬೆಳಗ್ಗೆಯಿಂದಲೇ ಭಕ್ತರು ಶ್ರೀ ದೇವರ ದರ್ಶನ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ದೇಗುಲದ ಆಡಳಿತ ಮಂಡಳಿ, ಆನುವಂಶಿಕ ಮೊಕ್ತೇಸರರು, ಅರ್ಚಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net