ಜಾತಿ, ಧರ್ಮ ಮೀರಿದ ಭಾಷೆ ತುಳು: ಹರೇಕಳ ಹಾಜಬ್ಬ

Book
Published on

ಮಂಗಳೂರು: ತುಳುವಿನಲ್ಲಿ ಹೆಚ್ಚಿನ ಸಾಹಿತ್ಯ ಕೃತಿಗಳು ಪ್ರಕಟಗೊಳ್ಳಬೇಕು. ಆ ಮೂಲಕ ಭಾಷೆ ಇನ್ನಷ್ಟು ಸಂಪದ್ಭರಿತವಾಗಬೇಕು. ತುಳುನಾಡಿನ ಎಲ್ಲರನ್ನೂ ಸಮಾನವಾಗಿ ಕಾಣುವ, ಜಾತಿ-ಮತ-ಧರ್ಮದ ಗಡಿ ಮೀರಿದ ಭಾಷೆ ತುಳು ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.

ಕವಿ, ಪ್ರಾಧ್ಯಾಪಕ ರಘು ಇಡ್ಕಿದು ಅವರ 28ನೇ ಕೃತಿ ‘ಮೋಕೆದಾಲೆಡ ಕೊಂಡಾಟದ ಪಾತೆರ’ವನ್ನು ಕೆನರಾ ಕಾಲೇಜು ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸದಾನಂದ ನಾರಾವಿ ಮಾತನಾಡಿ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ಪುಸ್ತಕಗಳನ್ನು ಇತರರು ಓದಬೇಕೆಂದು ನಾವು ಬಯಸುವಂತೆ, ಇತರರ ಪುಸ್ತಕಗಳನ್ನೂ ನಾವು ಓದಬೇಕು. ವ್ಯಾಕರಣದ ಕನಿಷ್ಠ ಜ್ಞಾನ ಹೊಂದಿದ್ದರೆ ಮಾತ್ರ ಉತ್ತಮ ಕವಿತೆ ಸೃಷ್ಟಿ ಸಾಧ್ಯ. ಈ ನಿಟ್ಟಿನಲ್ಲಿ ಕವಿಗಳು ಶ್ರಮ ಪಡಬೇಕು ಎಂದರು.

ತುಳು ರಂಗಭೂಮಿ ಹಿರಿಯ ನಟಿ ಜಯಶೀಲ ಮರೋಳಿ, ಸುರತ್ಕಲ್ ಗೋವಿಂದದಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ ಕೃಷ್ಣದಾಸ್ ಅತಿಥಿಗಳಾಗಿದ್ದರು. ಶಿಕ್ಷಕ ರಮೇಶ್ ಉಳಯ ಅವರು ಕೃತಿ ಕುರಿತು ಮಾತನಾಡಿದರು.

ವಿನಮ್ರ ಇಡ್ಕಿದು, ಆತ್ಮಿ, ನಮೀಶ್ ಪ್ರಾರ್ಥಿಸಿದರು. ರಘು ಇಡ್ಕಿದು ಸ್ವಾಗತಿಸಿದರು. ವಿದ್ಯಾ ರಘು ಇಡ್ಕಿದು ವಂದಿಸಿದರು. ಲತೀಶ್ ಸಂಕೋಳಿಗೆ ಕಾರ್ಯಕ್ರಮ ನಿರೂಪಿಸಿದರು.

ಕವಿಗಳ ಸೇರಿಗೆ: ಈ ಸಂದರ್ಭ ತುಳು ಕವಿಗಳ ಸೇರಿಗೆ ಕಾರ್ಯಕ್ರಮ ನಡೆಯಿತು. ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ಯಶವಂತ ಡಿ.ಎಸ್., ಸುಧಾ ನಾಗೇಶ್, ರೇಮಂಡ್ ಡಿ’ಕುನ್ಹ, ವಿಜಯಲಕ್ಷ್ಮೀ ಕಟೀಲು, ರಾಜೇಶ್ ಶೆಟ್ಟಿ ದೋಟ, ನಾರಾಯಣ ಕುಂಬ್ರ, ಬದ್ರುದ್ದೀನ್ ಕೂಳೂರು, ಲತೀಶ್ ಎಂ.ಸಂಕೊಲಿಗೆ, ಹಿತೇಶ್ ಕುಮಾರ್ ಎಂ., ಎಡ್ವರ್ಡ್ ಲೋಬೊ ತೊಕ್ಕೊಟ್ಟು, ದಾ.ನ.ಉಮಾಣ್ಣ, ರಮ್ಯಾ ಎಂ.ಶ್ರೀನಿವಾಸ, ಎಸ್.ಕೆ ಕುಂಪಲ, ವೆಂಕಟೇಶ್ ಗಟ್ಟಿ, ಸುಲೋಚನಾ ಪಚ್ಚಿನಡ್ಕ, ಶಶಿಧರ್ ಏಮಾಜೆ, ಗೀತಾ ಲಕ್ಷ್ಮೀಶ್, ಮಲ್ಲಿಕಾ ರೈ, ನಳಿನಾಕ್ಷಿ ಉದಯ ಕುಮಾರ್ ಭಾಗವಹಿಸಿದ್ದರು. ಡೊಂಬಯ್ಯ ಇಡ್ಕಿದು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net