ಬಿಜೆಪಿ ಬೆಂಬಲಿತರ ಭರ್ಜರಿ ಗೆಲುವು

30 vpt 1
ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಗಮಕ್ಕೆ ಆಯ್ಕೆಯಾದ ನೂತನ ಆಡಳಿತ ಮಂಡಳಿ ಸದಸ್ಯರು.
Published on

ವಿರಾಜಪೇಟೆ: ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಭಾನುವಾರ ಚುನಾವಣಾ ಪ್ರಕ್ರಯೆ ನಡೆಯಿತು. ಮಗ್ಗುಲ, ಐಮಂಗಲ, ಕುಕ್ಲೂರು, ಕದನೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಬೋಯಿಕೇರಿ ಗ್ರಾಮಗಳಿಗೆ ಸಿಮೀತವಾಗಿರುವ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಚುನಾವಣಾಧಿಕಾರಿ ಪಿ.ಆಶಾ ಉಪಸ್ಥಿತಿಯಲ್ಲಿ ನಡೆಯಿತು.

ಬೆಳಗ್ಗೆ 9ರಿಂದ ಆರಂಭವಾದ ಮತದಾನ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಒಟ್ಟು 480 ಮತದಾರರಿದ್ದು, 425 ಮತಗಳು ಚಲಾವಣೆಯೊಂದಿಗೆ ಶೇ.95ರಷ್ಟು ಮತದಾನವಾಯಿತು.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬೆಳ್ಳರಿಮಾಡು ಗ್ರಾಮದ ನರೇಂದ್ರ ಟಿ. ಪುಟ್ಟಿಚಂಡ(ನರು) 204 ಮತ, ಮಗ್ಗುಲ ಗ್ರಾಮದ ನಾಣಯ್ಯ ಟಿ.ವಾಟೇರಿರ(ಪ್ರೇಮ್) 196 ಮತ, ಐಮಂಗಲ ಗ್ರಾಮದ ದೇವಯ್ಯ ಎಂ.ಕುಂಡ್ರಂಡ(ದೇವಿ) 174 ಮತ, ಕದನೂರು ಗ್ರಾಮದ ಸುಬ್ರಮಣಿ ಪಿ.ಅಮ್ಮಣಿಚಂಡ(ರತ್ನಾ) 174 ಮತ ಪಡೆದುಕೊಂಡರು. ಮಹಿಳಾ ಮೀಸಲು ಕ್ಷೇತ್ರದಿಂದ ಐಮಂಗಲ ಗ್ರಾಮದ ಸ್ಮಿತಾ ಜಿ.ಬೊಳ್ಳಚಂಡ(ಪ್ರಕಾಶ್) 183 ಮತ, ಕುಕ್ಲೂರು ಗ್ರಾಮದ ಸಾವಿತ್ರಿ ಎಂ. ಮಂಡೇಪಂಡ ಶರೀನ್ 175 ಮತ ಪಡೆದರು. ಹಿಂದುಳಿದ ಪ್ರವರ್ಗ ‘ಎ’ ಮಿಸಲು ವರ್ಗ ಕ್ಷೇತ್ರದಲ್ಲಿ ಮಗ್ಗುಲ ಗ್ರಾಮದ ಟಿ.ಡಿ. ವಾಸು 192 ಮತ ಪಡೆದರು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕದನೂರು ಗ್ರಾಮದ ಎಂ.ಬಿ.ಭಾರತಿ 188 ಮತಗಳಿಂದ ವಿಜಯಿಯಾದರು.

ಪಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಗ್ಗುಲ ಗ್ರಾಮದ ಎಚ್.ಎಸ್.ಚಂದ್ರ 179 ಮತ ಪಡೆದುಕೊಂಡರು. ಸಾಲಗಾರರಲ್ಲದ ಕ್ಷೇತ್ರದಲ್ಲಿ ಮಗ್ಗುಲ ಗ್ರಾಮದ ಗ್ರೇಸಿ ಎಸ್.ಕುಪ್ಪಚ್ಚಿರ(ಸತೀಶ್) 37 ಮತ ಪಡೆದುಕೊಂಡಿದ್ದಾರೆ. 13 ಕ್ಷೇತ್ರದಲ್ಲಿ 10 ಕ್ಷೇತ್ರವು ಬಿಜೆಪಿ ವಶವಾಯಿತು.

ಬಿಜೆಪಿ ಮುಖಂಡ ವಾಟೇರಿರ ಬೋಪಣ್ಣ, ಶಕ್ತಿ ಕೇಂದ್ರದ ಅಧ್ಯಕ್ಷ ಚಾರಿಮಂಡ ಬಾನು ಬೋಪಣ್ಣ, ಬಿಳುಗುಂದ ಶಕ್ತಿ ಕೇಂದ್ರದ ಅಧ್ಯಕ್ಷ ವಾಟೇರಿರ ರಾಜಪ್ಪ, ಪ್ರಮುಖರಾದ ಚೋಕಂಡ ರಮೇಶ್ ಮಂದಣ್ಣ, ಕಾಣತಂಡ ಅಯ್ಯಪ್ಪ ರಾಯ್, ಮಂಡೇಪಂಡ ಚಿಟ್ಟಿಯಪ್ಪ, ಪುಲಿಯಂಡ ಪೊನ್ನಣ್ಣ,ಬೊಳ್ಳಚಂಡ ಪ್ರಕಾಶ್, ಪುಲಿಯಂಡ ದಿನು, ಮಂಡೇಪಂಡ ಮುತ್ತಪ್ಪ, ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ವ್ಯವಸ್ಥಾಪಕ ಗುಡ್ಡಂಡ ಜೋಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net