

ಮರಿಯಮ್ಮನಹಳ್ಳಿ: ಡಣಾಯಕನಕೆರೆ ಗ್ರಾ.ಪಂ. ಅಧ್ಯಕ್ಷೆಯಾಗಿ ಎ.ಲಕ್ಷ್ಮೀದೇವಿ ಆಯ್ಕೆಯಾಗಿ ದ್ದಾರೆ ಎಂದು ಹೊಸಪೇಟೆ ತಹಸೀಲ್ದಾರ್ ಶ್ರುತಿ ಎಂ.ಮಳ್ಳಪ್ಪಗೌಡ್ರ ಪ್ರಕಟಿಸಿದರು.
ಎ.ಲಕ್ಷ್ಮೀದೇವಿ, ಪಿ.ಸೋಮಪ್ಪ ಹಾಗೂ ರೂಪಾ ನಾಮಪತ್ರ ಸಲ್ಲಿಸಿದ್ದರು. ಒಟ್ಟು 19 ಮತಗಳ ಪೈಕಿ ಎ.ಲಕ್ಷ್ಮೀದೇವಿ ಹಾಗೂ ಸೋಮಪ್ಪ ತಲಾ 8 ಮತಗಳು ಪಡೆದರೆ, ರೂಪಾ ಮೂರು ಮತ ಪಡೆದರು. ಎ.ಲಕ್ಷ್ಮೀದೇವಿ ಮತ್ತು ಸೋಮಪ್ಪ ಸಮಾನ ಮತಗಳನ್ನು ಪಡೆದ ಕಾರಣ ಚೀಟಿ ಎತ್ತುವ ಮೂಲಕ ನಡೆದ ಆಯ್ಕೆ ನಡೆಸಲಾಯಿತು.
ಹಗರಿಬೊಮ್ಮನಹಳ್ಳಿ ಪಿಐ ವಿಕಾಸ್ ಲಮಾಣಿ, ಪಿಎಸ್‌ಐ ಮೌನೇಶ ರಾಥೋಡ್, ಉಪಾಧ್ಯಕ್ಷೆ ನೇತ್ರಾ ಸೂರ್ಯಪ್ರಕಾಶ, ಪಿಡಿಒ ಜಿಲಾನ್ ಬಾಷಾ, ಸದಸ್ಯರಾದ ಚಿನ್ನಾಪುರಿ, ಯು.ವೆಂಕಟೇಶ, ಹನುಮಂತ, ವಸಂತಕುಮಾರಿ, ಎಚ್.ನಾಗಪ್ಪ, ಆನಂದ, ರೇಣುಕಾ, ಶಶಿಕಲಾ, ಯು.ಸೋಮಪ್ಪ, ಪಕ್ಕೀರಪ್ಪ, ಜ್ಯೋತಿ, ರಮೇಶಪ್ಪ, ಸಾವಿತ್ರಮ್ಮ, ರೂಪ, ಅಕ್ಕಮಹಾದೇವಿ ಇತರರಿದ್ದರು.