

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೈಟ್ ಪೊಲಿಟಿಕ್ಸ್ ಚೆನ್ನಾಗಿ ಗೊತ್ತು ಎಂದು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಗುಂಡಿ ವಿವಾದ ರಾಜಕೀಯ ತಿರುವು ಪಡೆದಿದ್ದು, ಈ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾಜಿ ಶಾಸಕರು ವಾಗ್ದಾಳಿ ನಡೆಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಬಿಜೆಪಿಯವರಿಗೆ ನೈಟ್ ಪೊಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸ್ನವರು ನೈಟ್ ಪೊಲಿಟಿಕ್ಸ್ ಮಾಡ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ನೈಟ್ ಪೊಲಿಟಿಕ್ಸ್ ಚೆನ್ನಾಗಿ ಗೊತ್ತು. ಹೀಗಾಗಿ ನೈಟ್ ಪೊಲಿಟಿಕ್ಸ್ ಮಾಡಿ ಗೆದ್ದು ಬಂದಿದ್ದಾರೆ ಎಂದು ಸಂಜಯ ಪಾಟೀಲ್ ಹೇಳಿದರು.
ಜನರಿಗೆ ಸುಳ್ಳು ಭರವಸೆ ಕೊಟ್ಟು ಗೆದ್ದು ಬಂದಿದ್ದಾರೆ. ಈಗ ಭಾವನಾತ್ಮಕ ಪೊಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.