30,000 ರೂ.ಗೆ ಒಂದು ಲಡ್ಡು

Untitled-4
Published on

ಹೊಸೂರು : ಪಟ್ಟಣದ ಶ್ರೀ ಸಾಯಿ ನಗರದಲ್ಲಿ ಗಣೇಶನ ಸುಮಾರು ಒಂದೂ ಕಾಲು ಕೆಜಿ ತೂಕದ ಲಡ್ಡುವನ್ನು ಹರಾಜು ಹಾಕಲಾಗಿದೆ. ಸ್ಥಳಿಯ ನಿವಾಸಿ ಸಾಯಿ ಸೆಲ್ವಂ ಎಂಬುವರು 30,000 ರೂಪಾಯಿ ಹರಾಜು ಕೂಗಿ ಲಡ್ಡು ತಮ್ಮದಾಗಿಸಿಕೊಂಡರು. ಕಳೆದ ವರ್ಷವೂ 10,000 ರೂ. ಕೊಟ್ಟು ಲಡ್ಡು ಹರಾಜು ಪಡೆಯುತ್ತಿದ್ದ ಸಾಯಿ ಸೆಲ್ವಂ ಈ ವರ್ಷವೂ ಹರಾಜು ತಮ್ಮದಾಗಿಸಿಕೊಂಡರು. ಪ್ರತಿವರ್ಷವೂ ನಾವು ಈ ಹರಾಜಿನಲ್ಲಿ ಲಡ್ಡು ಖರೀದಿಸಿ ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡಿ ನಂತರ ಎಲ್ಲರಿಗೆ ಕೊಡುವುದು ರೂಢಿ. ಇದರಿಂದಾಗಿ ನಮಗೆ ಮನ@ಶಾಂತಿಯೊಂದಿಗೆ ಜೀವನದಲ್ಲಿ ಏಳಿಗೆಯಾಗುತ್ತಿದೆ ಎಂದರು ಸಾಯಿ ಸೆಲ್ವಂ.

ಅರ್ಧ ಕೆಜಿಯ ಮೂರು ಲಡ್ಡುಗಳು ತಲಾ 10,500 ರೂ., 12,600 ರೂ. ಮತ್ತು 13,000 ರೂ.ಗೆ ಹರಾಜಾದವು ಎಂದು ಶ್ರೀ ಗಣೇಶ ದೇವಸ್ಥಾನ ಟ್ರಸ್ಟಿನ ಸದಸ್ಯರಾದ ಕಾರ್ತಿಕ್​ ಶ್ರೀನಿವಾಸನ್​ ಮತ್ತು ತುಳಿಸೀಧರನ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net