ಹಾವು ಕಡಿದು ಕೃಷಿ ಕಾರ್ಮಿಕ ಸಾವು

Published on


ಚಾಮರಾಜನಗರ: ತಾಲೂಕಿನ ಗಣಗನೂರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಶನಿವಾರ ನಾಗರಹಾವು ಕಡಿದು ಮೃತಪಟ್ಟಿದ್ದಾರೆ.
ನವಿಲೂರು ಗ್ರಾಮದ ನಿವಾಸಿ ಮಲ್ಲಣ್ಣ (47) ಸಾವಿಗೀಡಾದವರು. ಎಂದಿನಂತೆ ಜಮೀನೊಂದರಲ್ಲಿ ಕೃಷಿ ಕೆಲಸಕ್ಕಾಗಿ ಹೋಗಿದ್ದ ಮಲ್ಲಣ್ಣ ಅವರಿಗೆ ಹಾವು ಕಡಿದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ. ಸ್ವಗ್ರಾಮದಲ್ಲಿ ಶನಿವಾರ ಮಲ್ಲಣ್ಣ ಅವರ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net