ಬಿಜೆಪಿ ಶಾಸಕ ಪಿ.ರಾಜೀವರ ತಾಯಿ ಕರೊನಾಗೆ ಬಲಿ

p rajeev mother
Published on

ಚಿಕ್ಕೋಡಿ: ಮಹಾಮಾರಿ ಕರೊನಾಗೆ ಬಿಜೆಪಿ ಶಾಸಕ ಪಿ.ರಾಜೀವ ಅವರ ತಾಯಿ ಶಾಂತಮ್ಮ ಪಾಂಡಪ್ಪ ಲಮಾಣಿ(72) ಬಲಿಯಾಗಿದ್ದಾರೆ.

ಕುಡಚಿ ಶಾಸಕ‌ ಪಿ.ರಾಜೀವ ಅವರ ತಾಯಿಗೆ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಒಂದು ವಾರದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಂದು ಬೆಳಗಿನಜಾವ ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದಲ್ಲಿ ಶಾಸಕರ ಕುಟಂಬಸ್ಥರು ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದನ್ನೂ ಓದಿರಿ ಪ್ರಥಮ ದಲಿತ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಜಗನ್ನಾಥ್‌ ಕೋವಿಡ್‌ಗೆ ಬಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net