

ಮಂಗಳೂರು: ಕೋಟೆಕಾರು ಪಟ್ಟಣ ಪಂಚಾಯಿತಿಯ ಒಟ್ಟು 17 ಸ್ಥಾನಗಳ ಪೈಕಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ.
ಕಳೆದ ಬಾರಿಯೂ 11 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿಯೂ ಅಷ್ಟೇ ಸ್ಥಾನಗಳನ್ನು ಪಡೆದಿದ್ದು, ಕಾಂಗ್ರೆಸ್ ಕೂಡ ಕಳೆದ ಬಾರಿಯಂತೆ 4 ಸ್ಥಾನ ಉಳಿಸಿಕೊಂಡಿದೆ. ಇನ್ನೊಂದೆಡೆ ಎಸ್‌ಡಿಪಿಐ ಕೂಡ ಕಳೆದ ಬಾರಿಯಂತೆ 1 ಸ್ಥಾನ ಪಡೆದಿದೆ. ಒಂದು ಸ್ಥಾನ ಪಡೆದಿದ್ದ ಸಿಪಿಐಎಂ ಈ ಬಾರಿ ಯಾವುದೇ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದು, ಆ ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ವಾರ್ಡ್ 1- ಅಡ್ಕ ಕಾಳಿಕಾಂಬ: ರಾಘವ ಗಟ್ಟಿ (ಬಿಜೆಪಿ), ವಾರ್ಡ್ 2 - ಕನೀರುತೋಟ: ಭವಾನಿ ದೇವದಾಸ್ (ಬಿಜೆಪಿ), ವಾರ್ಡ್ 3 - ಮಾಡೂರು: ಸುಜಿತ್ ಮಾಡೂರು (ಬಿಜೆಪಿ), ವಾರ್ಡ್4 - ಬಲ್ಯ: ಕಿರಣ್ ಕುಮಾರ್ (ಬಿಜೆಪಿ), ವಾರ್ಡ್ 5 - ಬಗಂಬಿಲ ಸೈಟ್: ಪ್ರವೀಣ್ ಬಗಂಬಿಲ (ಬಿಜೆಪಿ), ವಾರ್ಡ್ 6 - ವೈದ್ಯನಾಥ ನಗರ ಬಗಂಬಿಲ: ದಿವ್ಯಾ ಸತೀಶ್ (ಬಿಜೆಪಿ), ವಾರ್ಡ್ 7 - ಸುಳ್ಳಂಜೀರು, ಸಂಕೊಳಿಗೆ: ಉದಯ ಕುಮಾರ್ ಶೆಟ್ಟಿ (ಬಿಜೆಪಿ), ವಾರ್ಡ್ 8 -ತಾರಿಪಡ್ಪು: ಇಸಾಕ್ (ಕಾಂಗ್ರೆಸ್), ವಾರ್ಡ್ 9 - ಶಾರದಾನಗರ: ಅನಿತಾ ನಾರಾಯಣ (ಬಿಜೆಪಿ), ವಾರ್ಡ್ 10 -ಕುಶಾಲ್‌ನಗರ: ಧೀರಜ್ ಕುಶಾಲ್‌ನಗರ (ಬಿಜೆಪಿ), ವಾರ್ಡ್ 11 - ಮಡ್ಯಾರ್: ಹರೀಶ್ ರಾವ್ (ಪಕ್ಷೇತರ), ವಾರ್ಡ್ 12 - ಜಲಾಲ್‌ಭಾಗ್: ಆಯೆಷಾ ಜಲಾಲ್‌ಭಾಗ್ (ಕಾಂಗ್ರೆಸ್), ವಾರ್ಡ್ 13 - ಪನೀರ್: ಸೆಲಿಮಾ ಬಿ ಹಸೀನಾ ಶಮೀರ್ (ಎಸ್‌ಡಿಪಿಐ), ವಾರ್ಡ್ 14 - ಮಿತ್ರನಗರ: ಜಗದೀಶ ಕೊಂಡಾಣ (ಬಿಜೆಪಿ), ವಾರ್ಡ್ 15 -ಕೊಂಡಾಣ: ನವೀನ್ ಕೊಂಡಾಣ (ಬಿಜೆಪಿ), ವಾರ್ಡ್ 16 -ಅಜ್ಜಿನಡ್ಕ: ಮಹಮ್ಮದ್ ಬಾವ ಕೋಟೆಕಾರು (ಕಾಂಗ್ರೆಸ್), ವಾರ್ಡ್ 17 -ಕೋಮರಂಗಳ: ಜುಬೈದಾ (ಕಾಂಗ್ರೆಸ್).