

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣ ಎಣಿಕೆ ನಡೆದಿದ್ದು, 1.53 ಕೊಟಿ ರೂ. ಸಂಗ್ರಹವಾಗಿದೆ. ಭಕ್ತರು ಹಣದ ಜತೆಗೆ 2.5 ಕೆಜಿ ಬಂಗಾರ, 4.2 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ದೇವಿಗೆ ನೀಡಿದ್ದಾರೆ.
ಹೊಸ ವರ್ಷದ ಆರಂಭದಿಂದ ಪ್ರತಿನಿತ್ಯ 10 ಸಾವಿರ ಭಕ್ತರು ಕೊಲ್ಲೂರಿಗೆ ಆಗಮಿಸುತ್ತಿದ್ದಾರೆ. ಸದ್ಯ ಶಾಲಾ- ಕಾಲೇಜು ರಜೆ ಇರುವುದರಿಂದ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ. ದೇವಸ್ಥಾನದಲ್ಲಿ ಅತಿ ಹೆಚ್ಚು 1.53 ಕೋಟಿ ರೂ. ಕಾಣಿಕೆ ರೂಪದ ಹಣ ಸಂಗ್ರಹವಾಗಿರುವುದು ಇದೇ ಮೊದಲ ಬಾರಿ. ಪ್ರತಿ ತಿಂಗಳು ಕಾಣಿಕೆ ಎಣಿಕೆ ಮಾಡಲಾಗುತ್ತಿದ್ದು, ಸರಾಸರಿ 65 ಲಕ್ಷ ರೂ. ಸಂಗ್ರಹವಾಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆಯಲ್ಲಿ 1.39 ಕೋಟಿ ರೂ. ಸಂಗ್ರಹವಾಗಿತ್ತು.