500 ರೂ.ಗಾಗಿ ಚಾಕು ಇರಿತ

crime
Published on

ಹುಬ್ಬಳ್ಳಿ: ಪಡೆದಿದ್ದ 500 ರೂ. ಹಣಕ್ಕಾಗಿ ಕೊಲೆ ಮಾಡುವಷ್ಟ ಮಟ್ಟಿಗೆ ಗಲಾಟೆಯಾದ ಘಟನೆ ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆನಂದ ನಗರದ ಮಹ್ಮದ್ ಮೊರಬ ಎಂಬಾತ ಅಸ್ಲಾಂ ಮಹ್ಮದ್‌ನಿಂದ 500 ರೂ. ಪಡೆದಿದ್ದ. ಅದನ್ನು ಕೊಡುವ ನೆಪದಲ್ಲಿ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ರೆಹಮತ್ ನಗರದ ವಾಲಿಬಾಲ್ ಗ್ರೌಂಡ್‌ಗೆ ಕರೆಸಿಕೊಂಡಿದ್ದ. ಆಗ ಮಹ್ಮದ್ ಮತ್ತು ಅಸ್ಲಾಂ ನಡುವೆ ಗಲಾಟೆಯಾಗಿದೆ. ಅಸ್ಲಾಂ ಜತೆಗಿದ್ದ ಸಾಧಿಕ್, ಅಲ್ತಾಫ್, ಇರ್ಫಾನ್ ಕೂಡಿಕೊಂಡು ಮಹ್ಮದ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ಅಸ್ಲಾಂ ಚಾಕುವಿನಿಂದ ಮಹ್ಮದ್ ಬೆನ್ನು, ಎದೆಗೆ ಇರಿದಿದ್ದಾರೆ. ಜಮೀರ ಎಂಬಾತ ಮಹ್ಮದ್ ಕಾಲಿಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಮಹ್ಮದ್ ಮೊರಬನನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ಅಸ್ಲಾಂ, ಜಮೀರ, ಸಾಧಿಕ, ಅಲ್ತಾಫ್, ಇರ್ಫಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net