ಮೇ 1ರವರೆಗೆ ಗ್ರಾಮಗಳಲ್ಲಿ ಕಿಸಾನ್​ ಕ್ರೆಡಿಟ್​ ಕಾರ್ಡ್​ ಆಂದೋಲನ

farmers
Published on

ಬೆಂಗಳೂರು: ಗ್ರಾಮ ಪಂಚಾಯಿತಿಗಳು ಎಲ್ಲಾ ಅರ್ಹ ರೈತರಿಗೆ ಕಿಸಾನ್​ ಕ್ರೆಡಿಟ್​ ವಿತರಣೆಗೆ ಕ್ರಮವಹಿಸಲು ಮೇ 1ರ ವರೆಗೂ ಗ್ರಾಮಗಳಲ್ಲಿ ಆಂದೋಲನ ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಸುತ್ತೋಲೆ ಹೊರಡಿಸಿದೆ.

ಕೇಂದ್ರದ ಸೂಚನೆಯಂತೆ ಗ್ರಾಮಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯ ಸೇರ್ಪಡೆ ಮಾಡಿ, ರೈತರಿಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​ನಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಎಲ್ಲಾ ರೈತರು ಕಾರ್ಡ್​ ಪಡೆಯಲು ಕ್ರಮಕೈಗೊಳ್ಳುವಂತೆ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಹಾಗೆಯೇ, ಕಂದಾಯ ಇಲಾಖೆ, ಕೃಷಿ ಇಲಾಖೆ ಮತ್ತು ಸ್ಥಳಿಯ ಬ್ಯಾಂಕ್​ಗಳು ಅಗತ್ಯ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net