18 ತಿಂಗಳ ಕಿಲಾರಿ ಹೋರಿ 3.25 ಲಕ್ಷ ರೂ.ಗೆ ಮಾರಾಟ! ವರ್ಷಕ್ಕೆ 2.25 ಲಕ್ಷ ರೂ. ಲಾಭ ಪಡೆದ ರೈತ

kilari cow
Published on

ಬಾಗಲಕೋಟೆ: ಒಂದೂವರೆ ವರ್ಷದ ಕಿಲಾರಿ ತಳಿಯ ಹೋರಿ ಬರೋಬ್ಬರಿ 3.25 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ರೈತನ ಮುಖದಲ್ಲಿ ಮಂದಹಾಸ ಮೂಡಿದೆ.

ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ನಾಲ್ಕನೇ ಕಿನಾಲ್ ತೋಟದ ವಸತಿ ಪ್ರದೇಶದ ರೈತ ಭೀಮಪ್ಪ ಬರಡಗಿ ಎಂಬುವರು ಸಾಕಿದ್ದ ಕಿಲಾರಿ ಹೋರಿಯನ್ನ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ರೈತ ಅಶೋಕ‌ ಕುರಿ ಎಂಬುವರು 3.25 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದರು.

6 ಅಡಿ ಎತ್ತರದ ಪೊಗರ್ದಸ್ತಾದ ಕಿಲಾರಿ ಹೋರಿಯು ಜಾನುವಾರು ಪ್ರದರ್ಶನದಲ್ಲಿ ಆಕರ್ಷಣೆಯ ಕೇಂದ್ರಬಿಂದು. ಮೈಮಾಟದಿಂದಲೇ ಗಮನ ಸೆಳೆಯುವ ಈ ಹೋರಿಯನ್ನು ಆರು ತಿಂಗಳ ಕರು ಆಗಿದ್ದಾಗಲೇ ಭೀಮಪ್ಪ ಬರಡಗಿ ಅವರು 1 ಲಕ್ಷ ರೂ. ಕೊಟ್ಟು ಖರೀದಿಸಿದ್ದರು. ಸದ್ಯ 3.25 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ಒಂದು ವರ್ಷಕ್ಕೆ 2.25 ಲಕ್ಷ ರೂ. ಲಾಭ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net