ಬಡ್ಡಿ ದಂಧೆಕೋರರಿಗೆ ಚಾಟಿ ಬೀಸಿದ ಖಾಕಿ

Trek to Srishaila from 12
Invitation to a poetry competition
Published on

ವಿಜಯಪುರ: ಮೈಕ್ರೋಫೈನಾನ್ಸ್​ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ಆಧ್ಯಾದೇಶ&2025ರ ಅಧಿಸೂಚನೆ ಪ್ರಕಟಗೊಳಿಸಿದ ಬೆನ್ನಲ್ಲೇ ಪೊಲೀಸ್​ ಇಲಾಖೆ ವ್ಯಾಪಕ ಕಾರ್ಯಾಚರಣೆ ನಡೆಸಿ ಹಲವರ ಮೇಲೆ ಪ್ರಕರಣ ದಾಖಲಿಸಿದೆ.

ಕಳೆದ ಎರಡು ದಿನಗಳಿಂದ ಜಿಲ್ಲೆಯ 25 ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಒಟ್ಟು 104 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಆ ಪೈಕಿ 37 ಜನರ ಹತ್ತಿರ ಅನಧಿಕೃತ ಲೇವಾದೇವಿಗೆ ಸಂಬಂಧಿಸಿದ ನಗದು ಹಣ, ಖಾಲಿ ಬಾಂಡ್​, ಚೆಕ್​, ಕೈಗಡ ಪತ್ರ, ಪಹಣಿ ಪತ್ರಗಳು, ಬ್ಯಾಂಕ್​ ಪಾಸ್​ಬುಕ್​ಗಳು ಸೇರಿದಂತೆ ಇತರೆ ದಾಖಲಾತಿಗಳು ದೊರೆತಿವೆ.

ಖಾಲಿ ಬಾಂಡ್​& 489, ಖಾಲಿ ಚೆಕ್​& 285, ಪಾಸ್​ ಬುಕ್​& 95, ಕರಾರು ಪತ್ರ& 26, ಪಹಣಿ ಉತಾರ& 26, ಹಕ್ಕು ಪತ್ರ&16, ಇಸಾರ ಪತ್ರ&15, ಖರೀದಿ ಪತ್ರ&13, ಆಧಾರ್​ ಕಾರ್ಡ್​& 14, ಮೊಬೈಲ್​& 12, ಬಸ್​ ಪತ್ರ& 5, ಕೈಗಡ ಪತ್ರ&3, ಒಪ್ಪಿಗೆ ಪತ್ರ& 5, ಜಮೀನು ಖರೀದಿ ಪತ್ರ&2, ಎಟಿಎಂ&2, ಡೆಬಿಟ್​ ಕಾರ್ಡ್​& 2, ಒತ್ತಿ ಪತ್ರ&1, ನೋಂದಣಿ ಪತ್ರ&1, ನಗದು ಹಣ& 62.29 ಲಕ್ಷ ರೂ., ಬಂಗಾರದ ಆಭರಣ& 55 ಗ್ರಾಂ, 154 ಇತರ ವಸ್ತು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ದಾಖಲಾತಿಗಳನ್ನು ಮುಂದಿನ ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಎಸ್​ಪಿ ಲಕ್ಷ$್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net