

ಬೆಂಗಳೂರು: ಚೊಚ್ಚಲ ಆಯವ್ಯಯ‘ ಮಂಡಿಸಲು ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸೂಟ್ಕೇಸ್ ಸಂಪ್ರದಾಯ ಬಿಟ್ಟು ಲೆದರ್ ಫೈಲ್ ಹಿಡಿದು ಆಗಮಿಸಿದರು.
ಎಂದಿನಂತೆ ಜುಬ್ಬಾ- ಪೈಜಾಮ ಧರಿಸಿರುವ ಸಿಎಂ, ಜತೆಗೆ ಇಂದು ಶಲ್ಯ ಹಾಕಿಕೊಂಡು ಆಗಮಿಸಿದರು. ಇದಕ್ಕೂ ಮುನ್ನ ರೇಸ್ ಕೋರ್ಸ್ ನಿವಾಸದಲ್ಲಿ ಬಜೆಟ್ ಪ್ರತಿಯನ್ನು ಮುಖ್ಯಮಂತ್ರಿ ಅವರಿಗೆ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಎನ್. ಪ್ರಸಾದ್, ಕಾರ್ಯದರ್ಶಿಗಳಾದ ಎಕ್ ರೂಪ್ ಕೌರ್, ಪಿ.ಸಿ. ಜಾಫರ್ ಅಧಿಕಾರಿಗಳು ಹಸ್ತಾಂತರಿಸಿದರು. ಬಜೆಟ್ ಪ್ರತಿಯುಳ್ಳ ಫೈಲ್ ಹಿಡಿದು ವಿಧಾನಸೌಧಕ್ಕೆ ಬಂದ ಸಿಎಂ, ನಗುಮುಖದಲ್ಲಿ ವೀ ಸಿಂಬಲ್ ತೋರಿಸಿ ಒಳಗೆ ತೆರಳಿದರು.