ಸೆ.27ರಂದು ಕರ್ನಾಟಕ ಬಂದ್​ಗೆ ಕಿಸಾನ್​ ಮೋರ್ಚಾ ಕರೆ

farmers
Published on

ಮೈಸೂರು: ಸೆ.27ರಂದು ಕರ್ನಾಟಕ ಬಂದ್​ಗೆ ಕರ್ನಾಟಕ ಸಂಯುಕ್ತ ಕಿಸಾನ್​ ಮೋರ್ಚಾ ವತಿಯಿಂದ ಕರೆ ನೀಡಲಾಗಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿದ ಕುರುಬೂರು ಶಾಂತಕುಮಾರ್​, ಕೇಂದ್ರದ 3 ಕೃಷಿ ಕಾಯ್ದೆ ವಿರೋಧಿಸಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ, ಅಡುಗೆ ಅನಿಲ-ಇಂಧನ-ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ರಾಷ್ಟ್ರೀಯ ಸಂಯುಕ್ತ ಕಿಸಾನ್​ ಮೋರ್ಚಾವು ಭಾರತ್​ ಬಂದ್​ಗೆ ಕರೆ ನೀಡಿದೆ. ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಲು ಬಂದ್​ಗೆ ಬೆಂಬಲ ಸೂಚಿಸಿದ್ದು, ರೈತಪರ ಮತ್ತು ಪ್ರಗತಿಪರ ಸಂಘಟನೆಗಳೂ ಕೈಜೋಡಿಸಿವೆ. ಕರ್ನಾಟಕದಲ್ಲೂ ಬಂದ್​ ನಡೆಸಲು ಕರ್ನಾಟಕ ಸಂಯುಕ್ತ ಕಿಸಾನ್​ ಮೋರ್ಚಾ ಕರೆ ನೀಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net