ಎಚ್​ಡಿಕೆ ಮನೆ ಮೇಲೆ ನಾಡಧ್ವಜ: ಕನ್ನಡ ಬಾವುಟ ಹಾರಿಸಿ ಬಿಜೆಪಿಗೆ ಸೆಡ್ಡುಹೊಡೆದ ಜೆಡಿಎಸ್​

hdk and manjunath mane
Published on

ಬಿಡದಿ(ರಾಮನಗರ): ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿದ್ದ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಅಭಿಯಾನಕ್ಕೆ ಜೆಡಿಎಸ್​ ಸಾಥ್​ ನೀಡಿದೆ. ಸ್ವತಃ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಕೇತಿಗಾನಹಳ್ಳಿಯ ತೋಟದ ಮನೆಯ ಮೇಲೆ ಕನ್ನಡ ಬಾವುಟ ಹಾರಿಸಿದ್ದಾರೆ.

ಆ.9ರಂದು ಭಾರತದ ಒಕ್ಕೂಟಕ್ಕೆ ಮೈಸೂರು ಸಂಸ್ಥಾನ ಸೇರ್ಪಡೆಯಾದ ದಿನದ ಅಂಗವಾಗಿ ಕನ್ನಡಪರ ಸಂಘಟನೆಗಳು ಮನೆಗಳ ಮೇಲೆ ಕನ್ನಡದ ಬಾವುಟ ಹಾರಿಸುವ ಅಭಿಯಾನ ಹಮ್ಮಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್​ಡಿಕೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕನ್ನಡ ಬಾವುಟ ಹಾರಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ವರಿಷ್ಠರ ಸೂಚನೆಯಂತೆ ಶಾಸಕ ಎ.ಮಂಜುನಾಥ್​ ಕೂಡ ತಮ್ಮ ಮನೆ ಎದುರು ಕನ್ನಡ ಬಾವುಟ ಹಾರಿಸುವ ಮೂಲಕ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ಪ್ರಧಾನ ಮಂತ್ರಿಗಳು ದೇಶಾದ್ಯಂತ ರಾಷ್ಟ್ರಧ್ವ್ಚಜ ಅಭಿಯಾನ ಹಮ್ಮಿಕೊಂಡಿದ್ದಾರೆ. ಎಲ್ಲರೂ ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಕೋರಿದ್ದಾರೆ. ಇದಕ್ಕೆ ಪರ್ಯಾಯವಾಗಿ ಕನ್ನಡಪರ ಸಂಘಟನೆಗಳು ಮೈಸೂರು ಸಂಸ್ಥಾನ ಸೇರ್ಪಡೆಯಾದ ಐತಿಹಾಸಿಕ ದಿನದ ಹೆಸರಿನಲ್ಲಿ ನಾಡಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಂಡಿವೆ. ಈ ಅಭಿಯಾನಕ್ಕೆ ಬೆಂಬಲ ನೀಡಿ ಮೈಸೂರು ಸಂಸ್ಥಾನ ಸೇರ್ಪಡೆ ದಿನದ ಅಂಗವಾಗಿ ಕನ್ನಡದ ಬಾವುಟ ಹಾರಿಸುವ ಮೂಲಕ ಜೆಡಿಎಸ್​ ಬಿಜೆಪಿಗೆ ಸೆಡ್ಡು ಹೊಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net