

ಕಲಬುರಗಿ: ಕಳ್ಳಿ ಮಠದ ಪಿಠಾಧಿಪತಿ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಶುಕ್ರವಾರ ಲಿಂಗೈಕ್ಯರಾದರು.
ಕಮಲಾಪುರದ ಮಹಾಗಾಂವ ಗ್ರಾಮದ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರಿಗೆ 50 ವರ್ಷ ವಯಸ್ಸಾಗಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ರ ಬೀದರ್ ಜಿಲ್ಲೆಯ ನಂದಗಾಂವ್ಗೆ ತೆರಳಿದ್ದ ಶ್ರೀಗಳು ಸಂಗಮದಲ್ಲಿ ಸಂಕ್ರಾಂತಿ ಪುಣ್ಯ ಸ್ನಾನ ಮಾಡಿ ಬರುವಾಗ ಹೃದಯಾಘಾತವಾಗಿ ಕೊನೆಯುಸಿರೆಳೆದರು.