

ಬೆಂಗಳೂರು: ಕಲಬುರಗಿ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಚುನಾವಣೆಯ ಮತ ಎಣಿಕೆ ಸೋಮವಾರ (ಸೆ.6) ಬೆಳಗ್ಗೆ 8ಕ್ಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಸೋಲು-ಗೆಲವಿನ ಸ್ಪಷ್ಟ ಚಿತ್ರಣ ಸಿಗಲಿದೆ.
ಈ ಮೂರು ಪಾಲಿಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಜಿದ್ದಾಜಿದ್ದಿಗೆ ಬಿದ್ದಿದ್ದವು. ಈ ಎರಡೂ ಪಕ್ಷಕ್ಕೂ ಈ ಚುನಾವಣೆ ಪ್ರತಿಷ್ಠೆಯ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದ್ದರಿಂದ ಸಹಜವಾಗಿಯೇ ಫಲಿತಾಂಶದತ್ತ ಮತ್ತಷ್ಟು ಕುತೂಹಲ ಹೆಚ್ಚಿದೆ. ಜೆಡಿಎಸ್, ಎಎಪಿ ಸಹಿತ ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.
ಕಲಬುರಗಿ ಪಾಲಿಕೆಯ 55 ವಾರ್ಡ್ಗಳಿಗೆ ನಡೆದ ಮತದಾನದಲ್ಲಿ 300 ಅಭ್ಯರ್ಥಿಗಳು ಕಣದಲ್ಲಿದ್ದರೆ, ಹುಬ್ಬಳ್ಳಿ - ಧಾರವಾಡ ಪಾಲಿಕೆಯ 82 ವಾರ್ಡ್ಗಳ ಅಖಾಡದಲ್ಲಿ 420 ಮಂದಿ ಸ್ಪರ್ಧಿಗಿಳಿಸಿದ್ದರು. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ಗಳಲ್ಲಿ 385 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
ಬೆಳಗ್ಗೆ 10 ಗಂಟೆ ವರೆಗಿನ ಫಲಿತಾಂಶ ಹೀಗಿದೆ: ಇದು ಪಕ್ಷವಾರು ವಿಜೇತರ ಸಂಖ್ಯೆ
ಕಲಬುರಗಿ ಮೊದಲ ಹಂತದ 10 ವಾರ್ಡ್ಗಳ ಫಲಿತಾಂಶ
ಕಾಂಗ್ರೆಸ್- 6 ಸ್ಥಾನ ಗೆಲುವು (1, 12 , 13 , 15, 22 , 33ನೇ ವಾರ್ಡ್)
ಬಿಜೆಪಿ-3 ಸ್ಥಾನ ಗೆಲುವ (6, 9, 51ನೇ ವಾರ್ಡ್)
ಪಕ್ಷೇತರ- 1 ಸ್ಥಾನ ಗೆಲುವು (36 ನೇ ವಾರ್ಡ್)
ಬೆಳಗಾವಿ ಪಾಲಿಕೆಯ 29 ವಾರ್ಡ್ಗಳ ಫಲಿತಾಂಶ
ಬಿಜೆಪಿ- 14 ಸ್ಥಾನ ಗೆಲುವು
ಕಾಂಗ್ರೆಸ್- 6 ಸ್ಥಾನ ಗೆಲುವು
ಪಕ್ಷೇತರ- 5 ಸ್ಥಾನ ಗೆಲುವು
ಎಂಇಎಸ್- 3 ಸ್ಥಾನ ಗೆಲುವು
AIMIM- 1 ಸ್ಥಾನ ಗೆಲುವು
ಹುಬ್ಬಳ್ಳಿ-ಧಾರವಾಡ ಪಾಲಿಕೆಯ 32 ವಾರ್ಡ್ಗಳ ಫಲಿತಾಂಶ
ಬಿಜೆಪಿ- 18 ಸ್ಥಾನ ಗೆಲುವು
ಕಾಂಗ್ರೆಸ್- 11 ಸ್ಥಾನ ಗೆಲುವು
ಪಕ್ಷೇತರ- 3 ಸ್ಥಾನ ಗೆಲುವು