ಭಕ್ತಿಯಿಂದ ಜರುಗಿದ ಮೌಲಾಲಿ ಸವಾರಿ

Mudgal Savari
ಮುದಗಲ್‌ನಲ್ಲಿ ಶನಿವಾರ ಬೆಳಗಿನ ಜಾವ ಮೌಲಾಲಿ ಆಲಂಗಳ ಸವಾರಿ ನಡೆಯಿತು.
Published on

ಮುದಗಲ್: ಮೊಹರಂ ನಿಮಿತ್ತ ಪಟ್ಟಣದ ಬೇಗಂಪುರಪೇಟೆ ಮಸೀದಿಯಲ್ಲಿ ಪ್ರತಿಷ್ಠಾಪಿಸಿರುವ ಮೌಲಾಲಿ ಆಲಂಗಳ ಸವಾರಿ ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಜರುಗಿತು.

ಆಲಂಗಳ ಸವಾರಿ ಪ್ರಮುಖ ಬೀದಿಗಳಲ್ಲಿ ಸಾಗಿ ಕಿಲ್ಲಾದ ವಿವಿಧ ದರ್ಗಾ ಮತ್ತು ಹುಸೇನಿ ಆಲಂ ದರ್ಗಾಕ್ಕೆ ಭೇಟಿ ನೀಡಲಾಯಿತು. ದಾರಿಯುದ್ದಕ್ಕೂ ಯುವಕರು ಆಕಾಶದೆತ್ತರಕ್ಕೆ ಬಣ್ಣ ಬಣ್ಣದ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ಇಷ್ಟಾರ್ಥ ಸಿದ್ಧಿಗಾಗಿ ಮೌಲಾಲಿ ದರ್ಗಾದಲ್ಲಿ ಭಕ್ತರು ನೈವೇದ್ಯ, ಕೆಂಪು ಸಕ್ಕರೆ ಮುಡುಪು ನೀಡುವುದು ಕಂಡುಬಂತು.

ಸುಮಾರು 8 ಗಂಟೆಗಳ ಕಾಲ ನಡೆದ ಸವಾರಿ ಕಾರ್ಯಕ್ರಮವನ್ನು ವೀಕ್ಷಿಸಲು ಪಟ್ಟಣ ಹಾಗೂ ಗ್ರಾಮೀಣ ಭಾಗಗಳಿಂದ ಭಕ್ತರು ಆಗಮಿಸಿದ್ದರು. ನಂತರ ಅಗ್ನಿಕುಂಡ ಹಾಯವುದು ಮತ್ತು ಯುವಕರಿಂದ ಹೆಜ್ಜೆ ಮೇಳ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net