

ಸವದತ್ತಿ: ಸುದ್ದಿಯನ್ನು ಸರಳ ಭಾಷೆಯಲ್ಲಿ ಜನರಿಗೆ ತಿಳಿಸುವ ಸಾಮರ್ಥ್ಯ ಹೊಂದಿರುವವನೇ ಸಮರ್ಥ ಪತ್ರಕರ್ತನಾಗಲು ಸಾಧ್ಯ ಎಂದು ವರದಿಗಾರ ಹೃಷಿಕೇಶ ಬಹಾದ್ದೂರ್ ದೇಸಾಯಿ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ವಿಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಛಾಯಾಗ್ರಹಣ, ಪತ್ರಿಕಾ ವರದಿ ಮತ್ತು ಡಿಜಿಟಲ್ ಮಾಧ್ಯಮ ಕುರಿತು ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರ ಮತ್ತು ೋಟೋಗ್ರಾಫಿ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಛಾಯಾಗ್ರಾಹಕ ಮಹಾಂತೇಶ ಹಿರೇಮಠ ಮಾತನಾಡಿ, ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಛಾಯಾಗ್ರಹಣಕ್ಕೆ ಇರುವ ಶಕ್ತಿಯೇ ಅಂತಹದ್ದು. ಪದಗಳಲ್ಲಿ ಹೇಳಲಾಗದ ಮನುಷ್ಯನ ಭಾವನೆಗಳನ್ನು ಸಮರ್ಥವಾಗಿ ತೋರಿಸಬಲ್ಲದು. ಇಂದು ಛಾಯಾಗ್ರಹಣ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದು, ಈ ೇತ್ರದಲ್ಲಿ ಪುರುಷರಷ್ಟೇ ಅಲ್ಲದೆ ಮಹಿಳೆಯರು ಕೂಡ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದರು.
ಸಂಯೋಜಕ ಸಂತೋಷ ಎಚ್.ಎಂ. ಡಿಜಿಟಲ್ ಮಾಧ್ಯಮ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ 128 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಂಗ ನಿರ್ದೇಶಕ ಜಾಕೀರ್ ನದ್ಾ, ಸುನಿಲ್ ಎಸ್.ಎಚ್., ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ ಇತರರಿದ್ದರು. ಪೂರ್ಣಿಮಾ ಹುಡೇದ ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಕೆ.ರಾಮರೆಡ್ಡಿ ಸ್ವಾಗತಿಸಿದರು. ಡಾ.ಎ.ಎ್.ಬದಾಮಿ ವಂದಿಸಿದರು. ಪ್ರೀತಿ ಮಲ್ಲಾಡ ನಿರೂಪಿಸಿದರು.