

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಮೈಸೂರು ವಲಯ ವತಿಯಿಂದ 19 ವರ್ಷದೊಳಗಿನವರ ಅಂತರ ಜಿಲ್ಲಾ ಟೂರ್ನಿಗೆ ತಂಡದ ಆಯ್ಕೆ ಪ್ರಕ್ರಿಯೆ ಆ.13ರ ಬೆಳಗ್ಗೆ 8:30ಕ್ಕೆ ನಗರದ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಮೊದಲು ಆ. 14ರಂದು ಆಯ್ಕೆ ನಡೆಸಲು ನಿರ್ಧರಿಸಲಾಗಿತ್ತು. ವಾರಾಂತ್ಯ ಲಾಕ್ಡೌನ್ ಇರುವುದರಿಂದ ಒಂದು ದಿನ ಮುಂಚಿತವಾಗಿ ಆಯೋಜಿಸಲು ತೀರ್ವನಿಸಲಾಗಿದೆ. ಆಸಕ್ತರು ಆ.12ರ ಸಂಜೆ 5ರೊಳಗೆ ಹೆಸರು ನೋಂದಾಯಿಸಬಹುದು. 2002ರ ಸೆ.1ರ ಬಳಿಕ ಜನಿಸಿದವರು ಪಾಲ್ಗೊಳ್ಳಲು ಅರ್ಹತೆ ಹೊಂದಿದ್ದಾರೆ. 16 ವರ್ಷಕ್ಕಿಂತ ಕೆಳಗಿನವರಿಗೆ ಭಾಗವಹಿಸಲು ಅವಕಾಶವಿಲ್ಲ. ಮಾಹಿತಿಗೆ ದೂ: 0821-2519900 ಸಂಪರ್ಕಿಸಬಹುದು ಎಂದು ಕೆಎಸ್ಸಿಎ ಮೈಸೂರು ವಲಯ ನಿಯಂತ್ರಕ ಎಸ್.ಸುಧಾಕರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ತಂಡ: 19 ವರ್ಷದೊಳಗಿನ ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆ.14ರಂದು ಬೆಳಗ್ಗೆ 9.30ರಿಂದ ಬೆಂಗಳೂರಿನ ಕೆಎಸ್ಸಿಎಬಿ ಮೈದಾನದಲ್ಲಿ ಆಯ್ಕೆ ನಡೆಯಲಿದೆ. ಆಸಕ್ತ ಆಟಗಾರ್ತಿಯರು ಅಂದು ಬೆಳಗ್ಗೆ 9ರೊಳಗೆ ಮೈದಾನದಲ್ಲಿ ಹಾಜರಿರಬೇಕು.
2002ರ ಸೆ.1ರ ಬಳಿಕ ಜನಿಸಿದವರು ಪಾಲ್ಗೊಳ್ಳಬಹುದು. ಕೋವಿಡ್ ಲಸಿಕೆ ಪಡೆದವರು ಪ್ರಮಾಣಪತ್ರ ಹಾಜರು ಪಡಿಸಬೇಕು. ಲಸಿಕೆ ಪಡೆಯದವರು ಅಥವಾ 18 ವರ್ಷಕ್ಕಿಂತ ಕೆಳಗಿನವರು 48 ಗಂಟೆಗಳ ಒಳಗಿನ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ದೂರದ ಊರುಗಳಿಂದ ಬರುವವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೆಎಸ್ಸಿಎ ಪ್ರಕಟಣೆ ತಿಳಿಸಿದೆ.