ಬೆಂಗಳೂರಲ್ಲಿ ಎನ್​ಸಿಡಿಐಆರ್ ಯೋಜನೆಯಡಿ ಕೆಲಸ ಖಾಲಿ: ಬಿಇ, ಬಿ.ಟೆಕ್, ಎಂಇ, ಎಂ.ಟೆಕ್​ ವಿದ್ಯಾರ್ಥಿಗಳಿಗೆ ಅವಕಾಶ

ncdir
Published on

ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್​ಫಮೇಟಿಕ್ಸ್ ಆ್ಯಂಡ್ ರಿಸರ್ಚ್​ನಲ್ಲಿ (ಎನ್​ಸಿಡಿಐಆರ್) ಪ್ರಾರಂಭಿಸುತ್ತಿರುವ ಹಲವು ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಎ)- 1, ಗ್ರೇಡ್ ಬಿ- 3, ಪ್ರಾಜೆಕ್ಟ್ ಸೈಂಟಿಸ್ಟ್-ಸಿ (ಪ್ರೋಗ್ರಾಮರ್)-2, ಪ್ರಾಜೆಕ್ಟ್ ಅಡ್ಮಿನ್ ಅಸಿಸ್ಟೆಂಟ್- 1, ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್(ಸ್ಯಾಟಿಸ್ಟಿಕ್ಸ್)- 1 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಾರ್ಯಕ್ಷೇತ್ರವು ಬೆಂಗಳೂರಿನ ಸಿಎಂಐಆರ್-ಎನ್​ಸಿಡಿಐಆರ್ ಕಚೇರಿ/ಘಟಕವಾಗಿರುತ್ತದೆ. ಪ್ರಸ್ತುತ ರೆಗ್ಯುಲರ್ ಸ್ಕೇಲ್ ಬೇಸ್​ನಲ್ಲಿ ಸರ್ಕಾರಿ ವಿಭಾಗ/ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂದರ್ಶನ ಅಥವಾ ವೈಯಕ್ತಿಕ ಚರ್ಚೆ ನಡೆಸಿ ಅಭ್ಯರ್ಥಿಯ ಆಯ್ಕೆ ನಡೆಸಲಾಗುವುದು. ಆರಂಭದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಯೋಜನೆಯ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು. ಕಂಪ್ಯೂಟರ್ ಅಪ್ಲಿಕೇಷನ್/ ಇನ್​ಫಮೇಷನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್​ನಲ್ಲಿ ಬಿಇ/ ಬಿ.ಟೆಕ್/ ಎಂಇ/ ಎಂ.ಟೆಕ್/ ಪಿಎಚ್.ಡಿ ಮಾಡಿದ್ದು, ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ. ಕಂಪ್ಯೂಟರ್ ಜ್ಞಾನ ಅವಶ್ಯಕ. ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30-40 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮಾಸಿಕ 32,000- 57,660 ರೂ.ವೇತನ ಇದೆ.

ಅಧಿಸೂಚನೆಗೆ: https://bit.ly/3yhfrIe

ಮಾಹಿತಿಗೆ: /www.ncdirindia.org

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net