ಕಿತ್ತೂರು ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Kittur Rani Chennamma Residential Sainik School For Girls
Published on

ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಶಾಲೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಇಲ್ಲಿದೆ.

ಪದವೀಧರ ಶಿಕ್ಷಕ (ಇಂಗ್ಲಿಷ್​ ಮತ್ತು ತೆಲುಗು)

ಬಿ.ಎಡ್​ನೊಂದಿಗೆ ಇಂಗ್ಲಿಷ್​ ಹಾಗೂ ತೆಲುಗು ಭಾಷೆಯಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಿಬಿಎಸ್​ಇ ಶಾಲೆಯಲ್ಲಿ 6ರಿಂದ 10ನೇ ತರಗತಿ ಬೋಧನೆಯ ಅನುಭವ ಇರಬೇಕು.

ಶುಶ್ರೂಷಕಿ (ಮಹಿಳೆ ಮಾತ್ರ)

ಸರ್ಕಾರಿ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ನರ್ಸಿಂಗ್​ನಲ್ಲಿ ಪದವಿ ಅಥವಾ ಜಿಎನ್​ಎಮ್​ನಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು. ಪ್ರತಿಷ್ಠಿತ ಮಕ್ಕಳ ಆಸ್ಪತ್ರೆಯಲ್ಲಿ ತುರ್ತು ವಿಭಾಗ ಅಥವಾ ಐಸಿಯು ಘಟಕದಲ್ಲಿ 2ರಿಂದ 3 ವರ್ಷ ವೃತ್ತಿ ಅನುಭವ ಇರಬೇಕು.

ಸ್ವಾಗತಕಾರ ಹಾಗೂ ಸಾರ್ವಜನಿಕರ ಸಂಪರ್ಕ ಸಿಬ್ಬಂದಿ

ಅಭ್ಯರ್ಥಿಯು ಇಂಗ್ಲಿಷ್​, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿರಬೇಕು. ಕಂಪ್ಯೂಟರ್​ ಇರಬೇಕು. ಪದವೀಧರರಿಗೆ ಮೊದಲ ಆದ್ಯತೆ.

ಪಾಶ್ವಾತ್ಯ ಸಂಗೀತಗಾರ

ಸರ್ಕಾರಿ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಗೀತ ಪಠ್ಯಕ್ರಮದಲ್ಲಿ ಪದವಿ ಅಥವಾ ಡಿಪ್ಲೊಮಾ ಪದವಿ ಪಡೆದಿರಬೇಕು. ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತ ಎರಡರಲ್ಲೂ ಹೆಚ್ಚುವರಿ ಅರ್ಹತೆ ಇರುವವರಿಗೆ ಆದ್ಯತೆ.

ಸಂಗೀತ ಶಿಕ್ಷಕ

ಸರ್ಕಾರಿ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಗೀತದಲ್ಲಿ ಪದವಿ ಅಥವಾ ಡಿಪ್ಲೊಮಾ ಪದವಿ ಪಡೆದಿರಬೇಕು. ಭಾರತೀಯ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತ ಎರಡರಲ್ಲೂ ಹೆಚ್ಚುವರಿ ಅರ್ಹತೆ ಪಡೆದವರಿಗೆ ಮೊದಲ ಆದ್ಯತೆ.

ವಾರ್ಡನ್​ (ಮಹಿಳೆ)

ಪದವೀಧರರಾಗಿದ್ದು, ಇಂಗ್ಲಿಷ್​ ಜ್ಞಾನ ಇರಬೇಕು. ಅರ್ಹತೆ ಜತೆಗೆ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಇರಬೇಕು. ಗರಿಷ್ಠ 40 ವರ್ಷ ವಯೋಮಿತಿ ಇದೆ.

ವೇತನ: ಶಿಕ್ಷಕರಿಗೆ 33,189 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದ್ದು, ಉಳಿದ ಹುದ್ದೆಗಳಿಗೆ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ವೇತನ ನಿಗದಿಪಡಿಸಲಾಗುವುದು. ಇದರೊಂದಿಗೆ ಇತರ ಸೌಲಭ್ಯಗಳೂ ಇರಲಿವೆ.

ಅರ್ಜಿ ಸಲ್ಲಿಸಲು ಕೊನೇ ದಿನ: 15.4.2022

ಅರ್ಜಿ ಸಲ್ಲಿಸಬೇಕಾದ ವಿಳಾಸ: ಪ್ರಾಂಶುಪಾಲರು, ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿಶಾಲೆ, ಕಿತ್ತೂರ, ಬೆಳಗಾವಿ, 591115.

ಅಧಿಸೂಚನೆಗೆ: ವಿಜಯವಾಣಿ ಪತ್ರಿಕೆಯ ಏಪ್ರಿಲ್​ 2ರ 5ನೇ ಪುಟ ನೋಡಿ

ಮಾಹಿತಿಗೆ: www.kittursainikaschool.org

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net