ನಡುರಸ್ತೆಯಲ್ಲೇ ಮಹಿಳೆಯ ಕೈ ಹಿಡಿದು ಎಳೆದಾಡಿದ ಜೆಡಿಎಸ್​ ಮುಖಂಡ! ವಿಡಿಯೋ ವೈರಲ್​

harasment
Published on

ಧಾರವಾಡ: ನಡುರಸ್ತೆಯಲ್ಲೇ ಮಹಿಳೆಯ ಕೈ ಹಿಡಿದು ಎಳೆದಾಡಿದ ಆರೋಪದಡಿ ಜೆಡಿಎಸ್​ ಮುಖಂಡರೊಬ್ಬರ ಮೇಲೆ ಕೇಸ್​ ದಾಖಲಾಗಿದೆ. ಮಹಿಳೆಯ ಕೈ ಹಿಡಿದು ಜೆಡಿಎಸ್​ ಮುಖಂಡ ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸತ್ತೂರಿನ ಎಸ್​ಡಿಎಂ ದಂತ ವೈದ್ಯಕೀಯ ಕಾಲೇಜು ಬಳಿ ಈ ಘಟನೆ ಸಂಭವಿಸಿದೆ. ಆರೋಪಿ ಹೆಸರು ಶ್ರೀಕಾಂತ ಜಮನಾಳ. ಅನಿಮತಿ ಅತ್ತಿಗೇರಿ ಎಂಬಾಕೆಯ ಮನೆಗೆ ನುಗ್ಗಿದ ಶ್ರೀಕಾಂತ, ಆಕೆಯೊಂದಿಗೆ ಗಲಾಟೆ ಮಾಡಿದ್ದಾರೆ. ಅಲ್ಲದೆ ಮಹಿಳೆಯನ್ನು ರಸ್ತೆಗೆ ಎಳೆದುತಂದಿದ್ದಾರೆ. ಗಲಾಟೆ ಬಿಡಸಲು ಹೋದ ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾನೆ. ಈ ದೃಶ್ಯ ವೈರಲ್​ ಆಗಿದೆ. ಆರೋಪಿ ವಿರುದ್ಧ ವಿದ್ಯಾಗಿರಿ ಪೊಲೀಸ್​ ಠಾಣೆಯಲ್ಲಿ ಅನುಮತಿ ಅತ್ತಿಗೇರಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net