

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಪಾಕಿಸ್ತಾನ ಪ್ರೇಮಿ, ದೇಶ ದ್ರೋಹಿ. ಪಾಕಿಸ್ತಾನವನ್ನು ಹೊಗಳುವುದೇ ಅವರ ಕೆಲಸ. ಅವರಿಗೆ ಪಾಕಿಸ್ತಾನವೇ ಹೆಚ್ಚು ಪ್ರಿಯವಾಗಿದ್ದರೆ ಅಲ್ಲಿಗೇ ಹೋಗಿ ಇರಲಿ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ವಾಗ್ದಾಳಿ ನಡೆಸಿದರು.
ಬೊಮ್ಮನಹಳ್ಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ಮೇಳಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಸತೀಶ್ ರೆಡ್ಡಿ, ಪಾದರಾಯಪುರ ಗಲಾಟೆ ನಡೆದ ಸಂದರ್ಭದಲ್ಲಿ ಕೆಲ ವಿಡಿಯೋಗಳನ್ನ ನೋಡಿದ್ದೇನೆ. ಅವರಿಗೆ ಜಮೀರ್ ಹೂವು ಹಾಕಿ ಭರ್ಜರಿ ವೆಲ್ ಕಮ್ ಮಾಡಿರುವುದನ್ನೂ ನೋಡಿದ್ದೇವೆ. ಪಾಕಿಸ್ತಾನವೇ ನಮಗಿಂತ ಹೆಚ್ಚು ಕೋವಿಡ್ ನಿರ್ವಹಣೆ ಮಾಡುತ್ತಿದೆ ಎಂದು ಜಮೀರ್ ಹೇಳುತ್ತಾರೆ. ಈ ರೀತಿಯ ಹೇಳಿಕೆಗಳು ನೀಡುವುದು ದೇಶ ದ್ರೋಹದ ಕೆಲಸ ಎಂದು ಕಿಡಿಕಾರಿದರು.