ಎ.ಜೆ.ಕಾಳೇಗೌಡ, ಆರ್.ಗುರುಸ್ವಾಮಿ ಆಯ್ಕೆ

ಕೃಷಿಕ ಸಮಾಜದ ಎಚ್.ಡಿ.ಕೋಟೆ  ತಾಲೂಕು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನಿರ್ದೇಶಕರು ಅಭಿನಂದಿಸಿದರು.
ಕೃಷಿಕ ಸಮಾಜದ ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನಿರ್ದೇಶಕರು ಅಭಿನಂದಿಸಿದರು.
Published on

ಎಚ್.ಡಿ.ಕೋಟೆ: ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರಾಗಿ ಎ.ಜೆ.ಕಾಳೇಗೌಡ, ಉಪಾಧ್ಯಕ್ಷರಾಗಿ ಆರ್.ಗುರುಸ್ವಾಮಿ ಆಯ್ಕೆಯಾದರು.

ಪಟ್ಟಣದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ 15 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಎ.ಜೆ.ಕಾಳೇಗೌಡ, ಉಪಾಧ್ಯಕ್ಷರಾಗಿ ಆರ್.ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಜಯರಾಮೇಗೌಡ, ಕಜಾಂಚಿಯಾಗಿ ದೊಡ್ಡ ನೀಲಪ್ಪ, ಜಿಲ್ಲಾ ಪ್ರತಿನಿಧಿಯಾಗಿ ಆರ್.ಜೆ.ಸಿರೇಶ್, ನಿರ್ದೇಶಕರಾಗಿ ಕೆ.ಡಗಣ್ಣೇಗೌಡ, ಶಿವಸ್ವಾಮಿ, ಮಹೇಂದ್ರ, ಟಿ.ವೆಂಕಟೇಶ್, ಗೌಡೇಗೌಡ, ರಾಜೇಶ್, ಎ.ಎಸ್.ಸೋಮೇಶ್, ಎಸ್.ಗುರುಸ್ವಾಮಿ, ಸಿ.ಎನ್.ಸೋಮೇಶ್, ರಾಮಚಂದ್ರ ಆಯ್ಕೆಯಾದರು. ಚುವಾವಣಾಧಿಕಾರಿಯಾಗಿ ಜಯರಾಮಯ್ಯ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net