

ಮಂಗಳೂರು : ಹಿರಿಯ ನಾಗರಿಕರ ಆರೈಕೆಗಾಗಿ ಮಂಗಳೂರು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ವತಿಯಿಂದ ಕೇಂದ್ರ ಸರ್ಕಾರದ ಹೆಲ್ತ್ ಕೇರ್ ಸೆಕ್ಟರ್ ಸ್ಕಿಲ್ ಕೌನ್ಸಿಲ್
ಸಹಯೋಗದಲ್ಲಿ ವಯೋವೃದ್ಧರ ಆರೈಕೆ ನಿರ್ವಾಹಕ (ಜೆರಿಯಾಟ್ರಿಕ್ ಕೇರ್ ಗಿವರ್ ) ಮತ್ತು ಗೃಹ ಆರೋಗ್ಯ ಸಹಾಯಕ (ಹೋಮ್ ಹೆಲ್ತ್ ಏಯ್ಡ್) ಕೋರ್ಸ್‌ಆರಂಭಿಸಿದೆ.
ಕರಾವಳಿ ಕರ್ನಾಟಕದಲ್ಲಿ ಈ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಅನುಮೋದಿತ ತರಬೇತಿ ಪೂರೈಕೆದಾರರಾಗಿ ಮೊದಲ ಆಸ್ಪತ್ರೆಯಾಗಿ ಎ.ಜೆ. ಆಸ್ಪತ್ರೆ ಗುರುತು ಪಡೆದಿರುವುದು ಸಾರ್ಥಕ ಸಾಧನೆಯಾಗಿದೆ. ಈ ಕೋರ್ಸ್‌ನ ಗುರಿ ವಯೋವೃದ್ಧರಿಗೆ ಗುಣಮಟ್ಟದ ಆರೈಕೆ ನೀಡಲು ಅಗತ್ಯ ಕೌಶಲ ಮತ್ತು ಜ್ಞಾನವನ್ನು ಒದಗಿಸುವುದಾಗಿದೆ
ಇಂದಿನ ಸಮಾಜದಲ್ಲಿ ಹಿರಿಯ ಸಮುದಾಯಕ್ಕೆ ನೀಡಲಾಗುವ ಹೆಚ್ಚಿನ ಕಾಳಜಿಯು ತರಬೇತಿಯಿಲ್ಲದ, ತಾತ್ಕಾಲಿಕ ಮತ್ತು ಸಾಮಾನ್ಯವಾಗಿ ಅಸುರಕ್ಷಿತವಾಗಿದೆ. ರೋಗಿಗಳ ನಿರ್ವಹಣೆ, ಆರೈಕೆ ಮತ್ತು ಚಿಕಿತ್ಸೆ ಕುರಿತು ಪ್ರಮಾಣೀಕೃತ ತರಬೇತಿಯನ್ನು ಒದಗಿಸುವ ಮೂಲಕ ವಯಸ್ಸಾದ ಸಮುದಾಯಕ್ಕೆ ಸೇವೆ ಸಲ್ಲಿಸುವುದು ಕೋರ್ಸ್ ಉದ್ದೇಶವಾಗಿದೆ. ಆರಂಭಿಕ ಶಾಲೆಯನ್ನು ತೊರೆದವರು ಮತ್ತು ಪೂರ್ವ ಪದವೀಧರರಿಗೆ ವೃತ್ತಿಪರ ಕೌಶಲಗಳನ್ನು ಆರೋಗ್ಯ ಸಹಾಯಕರು ಮತ್ತು ವೃದ್ಧಾಪ್ಯ ಆರೈಕೆ ಕೆಲಸಗಾರರಾಗಿ ಒದಗಿಸುವುದಾಗಿದೆ. ಅದು ಅವರಿಗೆ ಸುಸ್ಥಿರ ಜೀವನೋಪಾಯವನ್ನು ಮುಂದುವರಿಸಲು ಮತ್ತು ಸಮಾಜದ ಉಪಯುಕ್ತ ಸದಸ್ಯರಾಗಲು ಸಹಕಾರಿಯಾಗಲಿದೆ.
ತರಗತಿಗೆ ನೋಂದಣಿ ಮಾಡಿಕೊಳ್ಳಲು ಎಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಮಾನವ ಸಂಪನ್ಮೂಲ ವಿಭಾಗದ ಈ ಕೆಳಗಿನ ಫೋನ್ ಸಂಖ್ಯೆ 8904001124 / 0824-6613153 ಸಂಪರ್ಕಿಸಬಹುದು. (ಕಚೇರಿ ಸಮಯ: ಬೆಳಿಗ್ಗೆ 8.30 ರಿಂದ ಸಾಯಂಕಾಲ 5.00). ತರಗತಿಯ ಅವಧಿ 2 ರಿಂದ 5 ತಿಂಗಳು. ವಯೋವೃದ್ಧರ ಆರೈಕೆ ನಿರ್ವಾಹಕ ತರಗತಿಯ ಶುಲ್ಕ 3000 ರೂ. ಹಾಗೂ ಗೃಹ ಆರೋಗ್ಯ ಸಹಾಯಕ ತರಗತಿಯ ಶುಲ್ಕ 5 ಸಾವಿರ ರೂ,ಆಗಿದೆ
ಎರಡೂ ಕೋರ್ಸ್‌ಗಳನ್ನು ಸ್ಕಿಲ್ ಕೌನ್ಸಿಲ್, ನವದೆಹಲಿಯ ಅಡಿಯಲ್ಲಿ ಭಾರತ ಸರ್ಕಾರವು ಅನುಮೋದಿಸಿದೆ. ನೀಡಲಾಗುವ ಪ್ರಮಾಣಪತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.