ಎ.ಜೆ. ಹಾಸ್ಪಿಟಲ್‌ನಲ್ಲಿ ಹೃದಯ ರಕ್ಷಣೆಗೆ 3 ಅತ್ಯಾಧುನಿಕ ಉಪಕರಣ

aj
Published on



ಮಂಗಳೂರು : ಎ.ಜೆ. ಆಸ್ಪತ್ರೆ ಹೃದಯ ವಿಭಾಗದಲ್ಲಿ ರೋಗಿಗಳ ಉತ್ತಮ ರೋಗ ನಿರ್ಣಯ ಮತ್ತು ಆರೈಕೆಗೆ ಸಹಾಯ ಮಾಡುವ
ಮೂರು ಅತ್ಯಾಧುನಿಕ ಉಪಕರಣಗಳನ್ನು ಲಕ್ಷ್ಮಿ ಮೆಮೋರಿಯಲ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ.ಎ.ಜೆ ಶೆಟ್ಟಿ ಅವರು ಉದ್ಘಾಟಿಸಿದರು.
ಲಕ್ಷ್ಮಿ ಮೆಮೋರಿಯಲ್ ಶಿಕ್ಷಣ ಟ್ರಸ್ಟ್‌ನ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಪ್ರಶಾಂತ್‌ಮಾರ್ಲ, ನಿರ್ದೇಶಕರಾದ ಡಾ.ಅಮಿತಾ ಮಾರ್ಲ, ಡಾ.ಅಶೋಕ್ ಹೆಗ್ಡೆ , ಹೃದ್ರೋಗ ತಜ್ಞರಾದ ಡಾ. ಮಂಜುನಾಥ್.ಬಿ.ವಿ, ಡಾ.ಪುರುಷೋತ್ತಮ್, ಡಾ.ಪ್ರವೀಣ್‌ಶೆಟ್ಟಿ, ಡಾ.ಪ್ರೇಮ್ ಆಳ್ವ ಉಪಸ್ಥಿತರಿದ್ದರು.
*ಆಪ್ಟಿಕಲ್ ಕೊಹರೆನ್ಸ್ ಟೋಮೋಗ್ರಫಿ(ಒಸಿಟಿ)
ಈ ಯಂತ್ರವು ಕೃತೃಮ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡುತ್ತದೆ. ಇದು ಬೆಂಗಳೂರಿನ ನಂತರ ಕರ್ನಾಟಕದಲ್ಲಿ ಎರಡನೇ ಯಂತ್ರವಾಗಿದೆ, ಇದನ್ನು ಅಬ್ಬೋಟ್ ಹೆಲ್ತ್ ಸೈನ್ಸಸ್ ಯುಎಸ್‌ಎ ಪೂರೈಸಿದೆ.ಈ ಯಂತ್ರವು ಕ್ಯಾಥ್ ಲ್ಯಾಬ್‌ನಲ್ಲಿ ಆಂಜಿಯೋಪ್ಲಾಸ್ಟಿಯ ಸಮಯದಲ್ಲಿ
ರಕ್ತನಾಳಗಳ ವಿವರವಾದ 3ಡಿ ಚಿತ್ರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಹೃದಯ ತಜ್ಞರಿಗೆ ನಿಖರವಾಗಿ ಸ್ಟೆಂಟ್
ಅಳವಡಿಸಲು ಮತ್ತು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
*ಹೃದಯದ ಎಂಆರ್‌ಐ ಮತ್ತು ಸಿಟಿ
ಎ.ಜೆ. ಆಸ್ಪತ್ರೆಯ ಎಂಆರ್‌ಐ ಆಧುನಿಕ ಹೃದಯ ಸಾಫ್ಟ್‌ವೇರ್‌ಗಳೊಂದಿಗೆ ಹೃದಯದ ಚಲನೆಗಳು, ಕವಾಟದ ಸಮಸ್ಯೆಗಳು, ಹೃದಯದ ಸ್ನಾಯುಗಳ ಆರೋಗ್ಯ ಮುಂತಾದ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಅದಕ್ಕೆ ಯಾವುದೇ ಹಸ್ತಕ್ಷೇಪ ಅಥವಾ ವಿಕಿರಣದ
ಅಪಾಯಗಳಿಲ್ಲ. ಎಂಆರ್‌ಐಯನ್ನು ಪೂರಕವಾಗಿ 256 ಸ್ಲೈಸ್ ಆಧುನಿಕ ಕೃತೃಮ ಬುದ್ಧಿಮತ್ತೆಯ ಸಿಟಿ ಮತ್ತು ಸೀಮೆನ್ಸ್ ಯುಎಸ್‌ಎ ಯಿಂದ ಪ್ರಮುಖ ಪಿಇಟ ಸಿಟಿ ಇದೆ. ಇದಕ್ಕೆ ಬೆಂಬಲವಾಗಿ ಈ ವರದಿಗಳನ್ನು ವಿಶ್ಲೇಷಿಸಲು ಡೆಡಿಕೇಟೆಡ್ ಕಾರ್ಡಿಯಾಕ್ ಇಮೇಜಿಂಗ್ ರೇಡಿಯೋಲಜಿಸ್ಟ್ ಇದ್ದಾರೆ. ಬೆಂಗಳೂರಿನ ಕೆಲವು ಕೇಂದ್ರಗಳ ಹೊರತು ಇಲ್ಲಿ ಲಭ್ಯವಿರುವ ವಿಶಿಷ್ಟ ಸೌಲಭ್ಯವಾಗಿದೆ.
*ಎಕೋಕಾರ್ಡಿಯೋಗ್ರಾಂ ಯಂತ್ರ 4ಡಿ :
ಫಿಲಿಪ್ಸ್ ಯುಎಸ್‌ಎ ಯಿಂದ ಪೂರೈಸಲ್ಪಟ್ಟಿದೆ, ಇದು ಕರ್ನಾಟಕದಲ್ಲಿ ಎರಡನೇ ಸ್ಥಾಪನೆಯಾಗಿದೆ, ಟ್ರಾನ್ಸ್ ಒಸೊಫೇಜಲ್ ಸ್ಕ್ಯಾನಿಂಗ್ ಸೇರಿದಂತೆ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ. ಇದು ವಯಸ್ಕ, ಮಕ್ಕಳ ಮತ್ತು ನವಜಾತ ಶಿಶುಗಳ ರೋಗಿಗಳಿಗೆ ನಿಖರ ಹೃದಯ
ಸ್ಕ್ಯಾನ್‌ಗಳನ್ನು ನೀಡುತ್ತದೆ.ಈ ಆಧುನಿಕ ಉಪಕರಣಗಳೊಂದಿಗೆ, ಎ.ಜೆ. ಆಸ್ಪತ್ರೆಯ ಹೃದಯ ರಕ್ಷಣಾ ವಿಭಾಗವು ವಿಶ್ವದ ಅತ್ಯಾಧುನಿಕ ಕೇಂದ್ರಗಳ ಸಾಲಿಗೆ ಸೇರಿದೆ. ವಿಶೇಷ ಪರಿಣತಿ ಹೊಂದಿರುವ ಡಾಕ್ಟರ್‌ಗಳು ಮತ್ತು ಸಿಬ್ಬಂದಿಗಳ ಬೆಂಬಲದೊಂದಿಗೆ ಅಗತ್ಯವಿರುವವರಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net