ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಸಾರಾ ಮಹೇಶ್​! ಆಂಧ್ರ ಅಧಿಕಾರಿಗಳ ಮನೆಗೆ ಹೋಯ್ತಾ 6 ಕೋಟಿ ರೂ.?

Rohini
Published on

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್ ಮತ್ತೆ ಸಿಡಿದೆದ್ದಿದ್ದು, ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್​ಟಿ ಸೇರಿ 9.ರೂ ಆಗುತ್ತದೆ. ಆದರೆ ರೋಹಿಣಿ ಸಿಂಧೂರಿ ಖರೀದಿಸಿರೋ ಒಂದು ಬ್ಯಾಗ್ ಬೆಲೆ 52 ರೂ. ಕೇವಲ ಬ್ಯಾಗ್ ಮೇಲೆ ಪ್ರಿಂಟ್ ಹಾಕಲು 42ರೂ ಬೇಕಾ? ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಈ ಬ್ಯಾಗ್ ಖರೀದಿಯಲ್ಲಿ 6.18 ಕೋಟಿ ರೂ. ಅಕ್ರಮವೆಸಗಲಾಗಿದೆ. ವಾಸ್ತವವಾಗಿ ಖರೀದಿಗೆ 1.47 ಕೋಟಿ ರೂ. ಆಗ್ತಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಈ ಬಗ್ಗೆ ಸಿಎಂ, ಸಿಎಸ್ ಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.

ಒಬ್ಬ ಎಸಿ ಬಂದಿದ್ದಾರೆ. ಅವರ ಗಂಡ ಗುತ್ತಿಗೆದಾರ. ಆತನಿಂದ ಬಟ್ಟೆ ಬ್ಯಾಗ್ ಖರೀದಿ ಮಾಡಿದ್ದಾರೆ. ಅವನೂ- ಇವರೂ ಕಿಕ್ ಬ್ಯಾಕ್ ಮಾತನಾಡಿಕೊಂಡಿದ್ದಾರೆ. ಕರ್ನಾಟಕದ ಸಾರ್ವಜನಿಕರ ಹಣ ಆಂಧ್ರ ಅಧಿಕಾರಿಗಳ ಮನೆಗೆ ಹೋಗುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net