ಹುಬ್ಬಳ್ಳಿಯ ಶ್ರೇಯಾನಗರ ಉದ್ಯಾನವನದಲ್ಲಿ ಯೋಗ ದಿನಾಚರಣೆ

New Project(13)
Published on

ಹುಬ್ಬಳ್ಳಿ: 'ಮಾನವೀಯತೆಗಾಗಿ ಯೋಗ' ಎಂಬ ಘೋಷ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಹುಬ್ಬಳ್ಳಿಯ ಗೋಕುಲರಸ್ತೆಯ ಶ್ರೇಯಾನಗರದ ಉದ್ಯಾನವನದಲ್ಲಿ ಆಚರಿಸಲಾಯಿತು.

ಶ್ರೇಯಾನಗರದ ನಿವಾಸಿಗಳ ಸಂಘ, ದಿವ್ಯಚೇತನ ಯೋಗ ಕೇಂದ್ರ, ರೋಟರಿ ಕ್ಲಬ್ ಹುಬ್ಬಳ್ಳಿ ಪಶ್ಚಿಮ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಗೋಕುಲ ರಸ್ತೆ ಪೊಲೀಸ್ ಠಾಣೆ ಇವರ ಸಹಬಾಗಿತ್ವದಲ್ಲಿ ಶ್ರೇಯಾನಗರದ ಉದ್ಯಾನವನದಲ್ಲಿ ಯೋಗ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಕೃತಾತ್ಮಾನಂದ ಸ್ವಾಮೀಜಿ ಮತ್ತು ಹುಬ್ಬಳ್ಳಿಯ ಚಿನ್ಮಯ ಮಿಶನ್ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಜೀವನ ಶೈಲಿ, ಆರೋಗ್ಯಕರ ಜೀವನದಲ್ಲಿ ಯೋಗದ ಮಹತ್ವ ಕುರಿತು ಮಾಹಿತಿ ನೀಡಿದರು.

ಯೋಗ ದಿನಾಚರಣೆಗೆ ಆಗಮಿಸಿದವರನ್ನು ಶ್ರೇಯಾನಗರ ನಿವಾಸಿಗಳ ಸಂಘದ ಅಧ್ಯಕ್ಷ ಪ್ರಕಾಶ ತೋಟದ್ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ದಿವ್ಯಚೇತನ ಯೋಗ ಕೇಂದ್ರದ ಯೋಗ ಗುರುಗಳಾದ ನಾಗರಾಜ ಜಾಲಿಹಾಳ ಅವರ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು. ಶ್ರೀಧರ ಜೂಜಾರ್ ಮತ್ತು ಸಂಗಡಿಗರ ಕೊಳಲು ವಾದನ ಯೋಗಾಭ್ಯಾಸಕ್ಕೆ ಹಿನ್ನೆಲೆಯಾದದ್ದು ವಿಶೇಷ. KSSIDC ಮಾಜಿ ಆಧ್ಯಕ್ಷರಾದ ಎನ್.ಎಸ್. ಬಿರಾದಾರ ಮತ್ತು ಮಲ್ಲೇಶ ಜಾಡರ, ರೋಟರಿ ಕ್ಲಬ್ ಹುಬ್ಬಳ್ಳಿ ಪಶ್ಚಿಮದ ಅಧ್ಯಕ್ಷ ಮಡಿವಾಳಪ್ಪ ಜುಂಜಣ್ಣವರ, ಗೋಕುಲ ರಸ್ತೆಯ ಸಿಪಿಐ ಜೆ.ಎಂ. ಕಾಲಿಮಿರ್ಚಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net