ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ

mlrc
Published on

ಬೆಳಗಾವಿ: ಇಲ್ಲಿನ ಎಂಎಲ್​ಆರ್​ಸಿ(MLRC)ಯಲ್ಲಿ ಮಂಗಳವಾರ ಭಾರತ-ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ನಡೆಯಿತು.

ಫೆ.27ರಿಂದ ಆರಂಭವಾಗಿರುವ ಭಾರತ- ಜಪಾನ್ ಜಂಟಿ ಸಮರಾಭ್ಯಾಸ ಮಾ.10ರ ವರೆಗೆ ನಡೆಯಲಿದೆ. 2018ರಿಂದಲೂ ಜಂಟಿ ಸಮರಾಭ್ಯಾಸ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ಧರ್ಮ ಗಾರ್ಡಿಯನ್ 2022' ಕಾರ್ಯಕ್ರಮ ವಾರ್ಷಿಕ ತರಬೇತಿ ಭಾಗವಾಗಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್, ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿವೆ.

ಈ ಸಮರಾಭ್ಯಾಸವು ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗಿದೆ. ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ, ಮನೆಗಳ ಮೇಲಿನ ಡ್ರಿಲ್‌ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆ, ನಿರಾಯುಧ ಯುದ್ಧ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳ ತರಬೇತಿಯನ್ನು ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net