ಪರಸಂಗಕ್ಕೆ ಆಸೆಪಟ್ಟು ಪತ್ನಿ ಕೈಗೆ ಸಿಕ್ಕಿಬಿದ್ದ! ಪಕ್ಕದ್ಮನೆ ಬಾಲಕಿ ಮೇಲೆ ಕಣ್ಣಿಟ್ಟಿದ್ದ ಕಾಮುಕನಿಗೆ ಆಯ್ತು ತಕ್ಕ ಶಾಸ್ತಿ

harrasment
Published on

ಶಿವಮೊಗ್ಗ: ಮದುವೆಯಾಗಿ ಪತ್ನಿ-ಮಗು ಇದ್ದರೂ ಇಲ್ಲೊಬ್ಬ ಭೂಪ, ಪರಸಂಗಕ್ಕೆ ಆಸೆ ಪಟ್ಟು ಪಕ್ಕದ ಮನೆಯ ಬಾಲಕಿಗೆ ಬಾಳು ನೀಡುವುದಾಗಿ ಪುಸಲಾಯಿಸುವಾಗ ತನ್ನ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಸಹ್ಯವಾಗಿ ನಡೆದುಕೊಂಡ ಗಂಡನಿಗೆ ಪತ್ನಿಯೇ ಛೀಮಾರಿ ಹಾಕಿದ್ದಾಳೆ.

ಇಂತಹ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ಈ ವ್ಯಕ್ತಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಆದರೂ ನೆರೆಮನೆಯ ಅಪ್ರಾಪ್ತೆ ಮೇಲೆ ಕಣ್ಣು ಹಾಕಿ ಆಕೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತ ಮಾಡುತ್ತಿದ್ದ.

ಆ.3ರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದವನೇ ಹೊರಗಡೆ ಸುತ್ತಾಡಿಕೊಂಡು ಬರೋಣವೆಂದು ಬಾಲಕಿಯನ್ನು ಕರೆದೊಯ್ದಿದ್ದ. ಎಲ್ಲಿಗೆ ಎಂದು ಪ್ರಶ್ನಿಸಿದ್ದಕ್ಕೆ ಮದುವೆಯಾಗೋಣ ಎಂದಿದ್ದ. ಮದುವೆಯಾಗಲು ಅಪ್ರಾಪ್ತೆ ನಿರಾಕರಿಸಿ ಕೂಗಿಕೊಂಡಿದ್ದು ಸುತ್ತಮುತ್ತಲ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿ, ಸಂಬಂಧಿಕರು ಮತ್ತು ಆತನ ಪತ್ನಿಯೂ ಸ್ಥಳಕ್ಕೆ ಬಂದಿದ್ದರು. ಬಳಿಕ ಅಪ್ರಾಪ್ತೆ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಗೆ ಆತನ ಪತ್ನಿ ಸೇರಿದಂತೆ ಅಲ್ಲಿ ನೆರೆದಿದ್ದವರು ಛೀಮಾರಿ ಹಾಕಿದ್ದ ಆರೆ. ಘಟನೆ ಬಗ್ಗೆ ತೀರ್ಥಹಳ್ಳಿ ಠಾಣೆಗೆ ಬಾಲಕಿ ದೂರು ನೀಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net