ಅಲಂಕಾರಕ್ಕಿಂತ ಹಸಿದ ಒಡಲು ಮುಖ್ಯ

ಕುರುಗೋಡಿನ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಕೊಟ್ಟೂರು ಸಂಸ್ಥಾನಮಠದ ಶ್ರೀ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಶಾಖಾ ಸಂಸ್ಥಾನ ಮಠದ ಪೀಠಾಧಿಪತಿ ನಿರಂಜನ ಪ್ರಭು ಸ್ವಾಮೀಜಿ, ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಜಿ.ಬಸನಗೌಡ, ಪುರಸಭೆ ಅಧ್ಯಕ್ಷ ಟಿ.ಶೇಕಣ್ಣ, ಸದಸ್ಯ ಚಾನಾಳ್ ಆನಂದ್ ಇದ್ದರು.

Published on

ಕುರುಗೋಡು: ಸಕಲ ಐಶ್ವರ್ಯ ಇದ್ದರೂ ಮನುಷ್ಯ ಸ್ವಾರ್ಥ ಬಿಟ್ಟಿಲ್ಲ. ಅಲಂಕಾರಕ್ಕಿಂತ ಹಸಿದ ಒಡಲು ಮುಖ್ಯವಾಗಿದ್ದು, ನಮ್ಮ ವಿಚಾರಗಳು ಬದುಕನ್ನು ರೂಪಿಸುತ್ತವೆ ಎಂದು ಜಗದ್ಗುರು ಕೊಟ್ಟೂರು ಸಂಸ್ಥಾನಮಠದ ಶ್ರೀ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಕೊಟ್ಟೂರು ಸ್ವಾಮಿ ಶಾಖಾ ಸಂಸ್ಥಾನ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೇವಿಪುರಾಣ ಮಂಗಲ ಹಾಗೂ 1001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಡಿಮೆ ಮತ್ತು ಗಳಿಸುವುದೇ ಬದುಕಲ್ಲ. ಕೇವಲ ಜ್ಞಾನ ಸಂಗ್ರಹದಿಂದ ಸಂತೃಪ್ತ ಜೀವನ ಸಾಧ್ಯವಿಲ್ಲ. ಜ್ಞಾನದ ಜತೆ ನಡೆ, ನುಡಿ, ಸಂಸ್ಕಾರ ಬದುಕಿಗೆ ತೃಪ್ತಿ ನೀಡುತ್ತದೆ. ಕೊಟ್ಟೂರು ಸ್ವಾಮಿ ಮಠ ಜಾತಿ, ಮತ, ಪಂಥಕ್ಕೆ ಸೀಮಿತವಾಗಿಲ್ಲ. ಅನ್ನ ಮತ್ತು ಅಕ್ಷರ ದಾಸೋಹ ನೀಡುವಲ್ಲಿ ಶ್ರೀ ಮಠ ತೊಡಗಿದೆ ಎಂದರು.

ಕೊಟ್ಟೂರು ಸ್ವಾಮಿ ಶಾಖಾ ಸಂಸ್ಥಾನ ಮಠದ ಪೀಠಾಧಿಪತಿ ನಿರಂಜನ ಪ್ರಭು ಸ್ವಾಮೀಜಿ ವತನಾಡಿ, ಮಹಿಳೆಯರ ಮುಖ್ಯವಾಹಿನಿಗೆ ಪ್ರೇರೇಪಿಸಿದ್ದು ಭಕ್ತಿ ಮತ್ತು ಧಾರ್ಮಿಕ ಚಳವಳಿಯಾಗಿದೆ. ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಪ್ರಮುಖವಾಗಿದೆ ಎಂದರು.

ದೇವಿಪುರಾಣದ ಬಹುತೇಕ ಸನ್ನಿವೇಶಗಳು ಇದಕ್ಕೆ ಪುಷ್ಠಿ ನೀಡುತ್ತವೆ. ಪ್ರಸ್ತುತ ಎಲ್ಲ ರಂಗದಲ್ಲೂ ಮಹಿಳೆಯರು ಪ್ರಗತಿ ಸಾಧಿಸಿದ್ದು, ಅವರ ಹುಟ್ಟು ಶಾಪವಲ್ಲ ಪುಣ್ಯವಾಗಿದೆ. ಸಕಲ ಸಂಕಷ್ಟ, ಸಂಕಲ್ಪ ಈಡೇರಿಕೆಗೆ ಉಡಿ ತುಂಬುವ ಕಾರ್ಯ ಸಹಾಯವಾಗಿದ್ದು, ಎಲ್ಲರೂ ಕೆಟ್ಟ ಚಿಂತನೆ ಬಿಟ್ಟು ಸದ್ಭಾವನೆ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಸಮಿತಿ ಅಧ್ಯಕ್ಷ ಜಿ.ಬಸನಗೌಡ, ಪುರಸಭೆ ಅಧ್ಯಕ್ಷ ಟಿ.ಶೇಕಣ್ಣ, ಸದಸ್ಯ ಚಾನಾಳ್ ಆನಂದ್, ಪ್ರಮುಖರಾದ ರವೀಂದ್ರನಾಥ್ ಗೌಡ, ಬಸಯ್ಯ ಮೂರ್ತಿ, ಜಿ.ನಾಗನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net