ಕಲಿಯಂಡ ತಂಡಕ್ಕೆ ಭರ್ಜರಿ ಜಯ

kodava hocky
Published on

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಮಂಗಳವಾರ ಓಡಿಯಂಡ ತಂಡದ ವಿರುದ್ಧ ೫-೦ ಗೋಲುಗಳ ಅಂತರದಲ್ಲಿ ಕಲಿಯಂಡ ತಂಡ ಭರ್ಜರಿ ಜಯ ಸಾಧಿಸಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಓಡಿಯಂಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕಲಿಯಂಡ ಜಯ ಸಾಧಿಸಿತು. ಕಲಿಯಂಡ ಪರ ಭರತ್, ದೇಶ್ ಮುತ್ತಣ್ಣ, ಚಿರಂತ್, ಚಿಣ್ಣಪ್ಪ ಹಾಗೂ ಕಿರಣ್ ತಲಾ ೧ ಗೋಲು ದಾಖಲಿಸಿದರು. ಓಡಿಯಂಡ ಪೃಥ್ವಿ ಪೊನ್ನಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೆರುವಾಳಂಡ ಮತ್ತು ಸಣ್ಣುವಂಡ ತಂಡಗಳ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ಸಣ್ಣುವಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಯತಿಕ್ ಅಯ್ಯಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೂವಯ್ಯ ೧ ಗೋಲು ಬಾರಿಸಿದರು. ಚೆರುವಾಳಂಡ ಪರ ಸಬ್ಬಯ್ಯ ೧ ಗೋಲು ದಾಖಲಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಸೋಮೆಯಂಡ ಮತ್ತು ಅಲ್ಲಾರಂಡ ನಡುವಿನ ಪಂದ್ಯದಲ್ಲಿ ೫-೧ ಗೋಲುಗಳ ಅಂತರದಲ್ಲಿ ಸೋಮೆಯಂಡ ತಂಡ ಗೆಲುವು ದಾಖಲಿಸಿತು. ಸೋಮೆಯಂಡ ಪರ ಅಪ್ಪಚ್ಚು ಭರ್ಜರಿ ೪ ಗೋಲು ದಾಖಲಿಸಿದರೆ, ಅಪ್ಪಯ್ಯ ೧ ಗೋಲು ಬಾರಿಸಿದರು. ಅಲ್ಲಾರಂಡ ಪರ ಗೌತಮ್ ಗಣಪತಿ ೧ ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕರಿನೆರವಂಡ ಮತ್ತು ಕರವಂಡ ತಂಡಗಳ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಕರವಂಡ ಜಯ ಸಾಧಿಸಿತು. ಕರವಂಡ ಪರ ಕಿಶಾನ್ ಸೋಮಯ್ಯ ಹಾಗೂ ಅಪ್ಪಚ್ಚು ತಲಾ ೧ ಗೋಲು ದಾಖಲಿಸಿದರು. ಕರಿನೆರವಂಡ ಪರ ಲಿತೇಶ್ ಬಿದ್ದಪ್ಪ ೧ ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಬಯವಂಡ ಮತ್ತು ಮುಕ್ಕಾಟಿರ(ಹರಿಹರ) ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಬಯವಂಡ ತಂಡ ಗೆಲುವು ದಾಖಲಿಸಿತು. ಬಯವಂಡ ಪರ ಜನಕ, ದೀಪು ಮಾದಪ್ಪ ಹಾಗೂ ಪೊನ್ನಣ್ಣ ತಲಾ ೧ ಗೋಲು ದಾಖಲಿಸಿದರು. ಮುಕ್ಕಾಟಿರ ನಿರನ್ ೧ ಗೋಲು ದಾಖಲಿಸಿದರು. ಮುಕ್ಕಾಟಿರ ಶ್ರುಹಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮೈದಾನ ೨ರಲ್ಲಿ ಕಾಯಪಂಡ ಮತ್ತು ಮಾಳೇಟಿರ(ಕುಕ್ಲೂರು) ತಂಡಗಳ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕಾಯಪಂಡ ತಂಡ ಗೆಲುವು ದಾಖಲಿಸಿತು. ಕಾಯಪಂಡ ಪರ ದೇವಯ್ಯ ೨ ಗೋಲು ದಾಖಲಿಸಿದರು. ಮಾಳೇಟಿರ ಸುವಿನ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಬಲ್ಲಚಂಡ ಮತ್ತು ಮೇಕೇರಿರ ತಂಡಗಳ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮೇಕೇರಿರ ತಂಡ ಜಯ ಸಾಧಿಸಿತು. ಮೇಕೇರಿರ ಪರ ಅಬಿನವ್ ಗಣಪತಿ ೧ ಗೋಲು ಬಾರಿಸಿದರು. ಬಲ್ಲಚಂಡ ನಾಣಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಂಬುಡಮಾಡ ಮತ್ತು ಚೊಟ್ಟೆಯಂಡಮಾಡ ತಂಡಗಳ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ೨ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಲ್ಲಿ ನಂಬುಡಮಾಡ ತಂಡ ಜಯ ಸಾಧಿಸಿತು.

ನಂಬುಡಮಾಡ ಪರ ಜೆಮ್ಸಿ ಹಾಗೂ ನಿಹಾಲ್ ಅಚ್ಚಯ್ಯ ತಲಾ ೧ ಗೋಲು ದಾಖಲಿಸಿದರು. ಚೊಟ್ಟೆಯಂಡಮಾಡ ಪರ ನಾಣಯ್ಯ ಹಾಗೂ ದೀಪಕ್ ತಲಾ ೧ ಗೋಲು ದಾಖಲಿಸಿದರು. ಚೊಟ್ಟೆಯಂಡಮಾಡ ಮೋಹಿತ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಅಯ್ಯನೆರವಂಡ ಮತ್ತು ಅಂಜಪರವಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಅಂಜಪರವಂಡ ಗೆಲುವು ದಾಖಲಿಸಿತು. ಅಂಜಪರವಂಡ ಪರ ಚಿರಾಗ್ ಚೆಂಗಪ್ಪ ೨, ಜತನ್ ಅಯ್ಯಪ್ಪ, ರೋಶನ್ ಮಾದಪ್ಪ ಹಾಗೂ ವಿನಯ್ ಪೂವಣ್ಣ ತಲಾ ೧ ಗೋಲು ದಾಖಲಿಸಿದರು. ಅಯ್ಯನೆರವಂಡ ತನುಷ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಇಂದಿನ ಪಂದ್ಯಾಟ

ಮೈದಾನ ೧

ಬೆಳಿಗ್ಗೆ ೮.೩೦ ಗಂಟೆಗೆ ಮಂಡೇಟಿರ ಮತ್ತು ಚಂಗುಲಂಡ, ೯.೩೦ ಗಂಟೆಗೆ ಕಳ್ಳಿಚಂಡ ಮತ್ತು ಮಚ್ಚಾರಂಡ, ೧೦.೩೦ಕ್ಕೆ ಕೊಂಗಂಡ ಮತ್ತು ಕಂಬೀರಂಡ, ೧೧.೩೦ಕ್ಕೆ ಬಾಳೆಯಡ ಮತ್ತು ಕೋಣೇರಿರ, ಮಧ್ಯಾಹ್ನ ೧೨.೩೦ಕ್ಕೆ ಇಟ್ಟಿರ ಮತ್ತು ಕಂಬೆಯಂಡ, ೧.೩೦ ಗಂಟೆಗೆ ಕಾಂಡಂಡ ಮತ್ತು ನುಚ್ಚಿಮಣಿಯಂಡ, ೨.೩೦ಕ್ಕೆ ಮಲ್ಲಂಡ ಮತ್ತು ಕುಲ್ಲೇಟಿರ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.

ಮೈದಾನ ೨

ಬೆಳಿಗ್ಗೆ ೮.೩೦ಕ್ಕೆ ಮಾದಂಡ ಮತ್ತು ಮದ್ರೀರ, ೯.೩೦ ಗಂಟೆಗೆ ಪಳಂಗಂಡ ಮತ್ತು ಮೇಚಿಯಂಡ, ೧೦.೩೦ ಗಂಟೆಗೆ ಬೊಳ್ಳಂಡ ಮತ್ತು ವಾಟೇರಿರ, ೧೧.೩೦ಕ್ಕೆ ಕೆಚೇಟಿರ (ಕಡಗದಾಳು) ಮತ್ತು ಬೊಟ್ಟೋಳಂಡ, ಮಧ್ಯಾಹ್ನ ೧೨.೩೦ ಗಂಟೆಗೆ ಕನ್ನಂಡ ಮತ್ತು ಕೋಡೀರ, ೧.೩೦ಕ್ಕೆ ಚೇಂದಂಡ ಮತ್ತು ಬಡುವಮಂಡ ಕುಟುಂಬಗಳು ಪೈಪೋಟಿ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net