

ಸಿದ್ದಾಪುರ: ಇಲ್ಲಿನ ಸುತ್ತಮುತ್ತಲ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಗಾಳಿ-ಮಳೆಗೆ ಬೃಹತ್ ಮರ ಧರೆಗುರುಳಿದೆ.
ಪಾಲಿಬೆಟ್ಟ ಹಾಗೂ ಗೋಣಿಕೊಪ್ಪ ರಸ್ತೆಯಲ್ಲಿ ಬುಧವಾರ ಸಂಜೆ ಭಾರಿ ಗಾತ್ರದ ಮರ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ರಸ್ತೆ ಸಂಚಾರ ಅಲ್ಪ ಹೊತ್ತು ಅಸ್ತವ್ಯಸ್ತವಾಗಿದೆ. ಮಳೆ ಮಧ್ಯೆಯೂ ಸ್ಥಳೀಯರು ಮರ ತೆರವು ಕಾರ್ಯಾಚರಣೆ ಮುಂದುವರಿಸಿ, ಕತ್ತಲಾಗಿದ್ದರಿಂದ ಕೈಬಿಟ್ಟಿದ್ದಾರೆ.