ಹೆದ್ದಾರಿಯಲ್ಲಿ ಉರುಳಿ ಬಿದ್ದ ಬೃಹತ್ ಮರ

24-ANP-P2
ಗಿಳಾಲಗುಂಡಿಯಲ್ಲಿ ರಾಷ್ಟಿçÃಯ ಹೆದ್ದಾರಿಯಲ್ಲಿ ಬೃಹತ್ ಮರ ಉರುಳಿ ಬಿದ್ದಿರುವುದು.
Published on

ಆನಂದಪುರ: ಪಟ್ಟಣದ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಅತಿಯಾದ ಮಳೆಯ ಕಾರಣ ಕೆಲವಡೆ ಹಾನಿ ಉಂಟಾಗಿದೆ. ಸಮೀಪದ ಗಿಳಾಲಗುಂಡಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಬೃಹತ್ ಗಾತ್ರ ಮರ ಉರುಳಿ ಬಿದ್ದಿದೆ. ಇದರಿಂದ ಶಿವಮೊಗ್ಗ-ಸಾಗರ ಮಾರ್ಗದ ವಾಹನ ಸಂಚಾರ ಕೆಲಕಾಲ ತೊಂದರೆ ಉಂಟಾಗಿತ್ತು. ಸ್ಥಳೀಯರು ಮತ್ತು ರೈತರು ಮರದ ರೆಂಬೆ ಮತ್ತು ಕಾಂಡ ಕತ್ತರಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಆನಂದಪುರ ಗ್ರಾಪಂ ವ್ಯಾಪ್ತಿಯ ಮಲಂದೂರು ಗ್ರಾಮದಲ್ಲಿ ಸೋವವಾರ ಬೆಳಗ್ಗೆ ತಿಪ್ಪಿನಜಡ್ಡು ನಾಗರಾಜ್ ಎಂಬುವವರ ಮನೆ ಗೋಡೆ ಹಾಗೂ ಮೇಲ್ಛಾವಣಿ ಕುಸಿದುಬಿದ್ದಿದೆ. ಮನೆ ಗೋಡೆ ಬಿದ್ದ ಶಬ್ದ ಕೇಳಿ ಮನೆಯವರೆಲ್ಲ ಹೊರಬಂದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಗ್ರಾಪಂ ಉಪಾಧ್ಯಕ್ಷ ಗಜೇಂದ್ರ ಯಾದವ್ ಮತ್ತು ಸಿಬ್ಬಂದಿ, ಗ್ರಾಮ ಲೆಕ್ಕಾಽಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net