ಗಾಳಿ-ಮಳೆಗೆ ನೆಲಕ್ಕುರುಳಿದ ಬೃಹತ್ ಮರ

Sirwar Rain
ನವಲಕಲ್ ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ಗಾಳಿಗೆ ಬೃಹತ್ ಮರ ಬಿದ್ದಿರುವುದು.
Published on

ಸಿರವಾರ: ತಾಲೂಕಿನ ನವಲಕಲ್ ಸೇರಿ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆ ಸುರಿದಿದೆ. ನವಲಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣರದಲ್ಲಿ ಬೃಹತ್ ಮರ ನೆಲಕ್ಕೆ ಉರುಳಿದೆ.

ಈಗ ಶಾಲೆಗಳಿಗೆ ರಜೆ ಇರುವ ಹೆಚ್ಚಿನ ಅನಾಹುತ ತಪ್ಪಿದೆ. ಇನ್ನೂ ಗ್ರಾಮದಲ್ಲಿ ನಡೆಯುತ್ತಿದ್ದ ಶುಭ ಸಮಾರಂಭಕ್ಕೆ ಮಳೆರಾಯ ಅಡ್ಡಿ ಉಂಟು ಮಾಡಿತು. ಕೆಲ ಗ್ರಾಮಗಳಲ್ಲಿ ತುಂತುರು ಮಳೆಯಾದರೆ, ಬಿರುಗಾಳಿಯಿಂದಾಗಿ ಭತ್ತದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net