ಅಗಿಲೆ ಗ್ರಾಮದಲ್ಲಿ ಕುಸಿದು ಬಿದ್ದ ಬೃಹತ್ ಶೆಡ್

ಅಗಿಲೆ ಗ್ರಾಮದಲ್ಲಿ ಕುಸಿದು ಬಿದ್ದ ಬೃಹತ್ ಶೆಡ್
Published on

ಹಾಸನ: ತಾಲೂಕಿನ ಅಗಿಲೆ ಗ್ರಾಮ ಬಳಿ ನಿರ್ಮಾಣ ಹಂತದ ಬೃಹತ್ ಶೆಡ್ ಶನಿವಾರ ದಿಢೀರ್ ಕುಸಿದು ಬಿದ್ದಿದೆ.

ಹಾಸನ ಮಹಾನಗರ ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮರು ಬಳಕೆಯ ಕಸ ವಿಂಗಡಣೆಗಾಗಿ ಶೆಡ್ ನಿರ್ಮಾಣ ಮಾಡಲಾಗುತ್ತಿತ್ತು. ಕಾರ್ಮಿಕರು ಕೆಲಸ ಮಾಡುವ ವೇಳೆ ಶೆಡ್ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಮೆಂಟ್ ಪಿಲ್ಲರ್ ಮೇಲೆ ಬೃಹತ್ ಕಬ್ಬಿಣದ ಕಂಬ ಅಳವಡಿಸಿ ಶೆಡ್ ನಿರ್ಮಾಣ ಮಾಡಲಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net