ಸಾಲಿಗ್ರಾಮದಲ್ಲಿ ಗಮನ ಸೆಳೆದ ಬೃಹತ್ ಮೆರವಣಿಗೆ

ಸಾಲಿಗ್ರಾಮದಲ್ಲಿ ಕೋರೆಗಾಂವ್ ಸ್ತಬ್ಧ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು
ಸಾಲಿಗ್ರಾಮದಲ್ಲಿ ಕೋರೆಗಾಂವ್ ಸ್ತಬ್ಧ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು
Published on

ಸಾಲಿಗ್ರಾಮ: ಭೀಮ ಕೋರೆಗಾಂವ್ ವಿಜಯೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಯಿತು.

ಪಟ್ಟಣದ ಅಂಬೇಡ್ಕರ್ ನಗರದಿಂದ ಆರಂಭವಾದ ಮೆರವಣಿಗೆ ಡಬಲ್ ಟ್ಯಾಂಕ್, ರಾಮನಾಥಪುರ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್, ಮಹಾವೀರ ರಸ್ತೆಯಿಂದ ಗಾಂಧಿ ವೃತ್ತದವರೆಗೆ ಸಾಗಿತು.

ಮೆರವಣಿಗೆಯಲ್ಲಿ ಅಂಬೇಡ್ಕರ್ ಹಾಗೂ ವಿಜಯೋತ್ಸವದ ವಿವಿಧ ಮಾದರಿಯ ಸ್ತಬ್ಧ ಚಿತ್ರಗಳು, ಭಾಗವಹಿಸಿದ್ದವು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯುವ ಸಮೂಹ ಅಂಬೇಡ್ಕರ್ ಅವರಿಗೆ ಜಯ ಘೋಷಣೆ ಕೂಗುತ್ತ ಡಿಜೆ ಸಾಂಗ್‌ಗಳಿಗೆ ನೃತ್ಯ ಮಾಡಿತು. ವಿವಿಧ ಸಂಘಟನೆಗಳ ಮುಖಂಡರು, ಯುವಕರು, ಮಹಿಳೆಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳೆಲ್ಲಿ ನೀಲಿ ಬಣ್ಣದ ಬಾವುಟಗಳು ಹಾಗೂ ಬಂಟಿಂಗ್ಸ್ ರಾರಾಜಿಸುತ್ತಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net