ಅಪಾರ ಪ್ರಮಾಣದ ಮರಗಳು ಬೆಂಕಿಹಾಗುತಿ

ಹೊಳೆನರಸೀಪುರ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಸೂರ್ಯ ಸಾ ಮಿಲ್‌ನಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ.
ಹೊಳೆನರಸೀಪುರ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಸೂರ್ಯ ಸಾ ಮಿಲ್‌ನಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ.
Published on

ಹೊಳೆನರಸೀಪುರ: ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಸೂರ್ಯ ಸಾ ಮಿಲ್‌ನಲ್ಲಿ ಗುರುವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ಮರಗಳು ಬೆಂಕಿಗಾಹುತಿಯಾಗಿದೆ.

ಅಮಿದ್ ಅವರ ಸಾ ಮಿಲ್ ಇದಾಗಿದ್ದು, ದಾಸ್ತಾನು ಇರಿಸಿದ್ದ ಪ್ಲೈವುಡ್‌ಗಳೂ ಸುಟ್ಟು ಹೋಗಿದೆ. ಅಲ್ಲದೆ ಪ್ಲೈವುಡ್ ತಯಾರಿಸಲು ಇರಿಸಿದ್ದ ಮರದ ದಿಮ್ಮಿಗಳಿಗೂ ಬೆಂಕಿ ಆವರಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಬಂದು ಬೆಂಕಿ ನಂದಿಸಿದರು.

ಬೆಂಕಿಯ ರಭಸಕ್ಕೆ ಅಗ್ನಿಶಾಮಕ ದಳದ ಮಿನಿ ವಾಹನದ ಬಿಡಿ ಭಾಗಗಳಿಗೆ ಬೆಂಕಿ ತಗುಲಿದ್ದು, ಠಾಣಾಧಿಕಾರಿ ಸೋಮಶೇಖರ್ ಚಾಲಕ ಜನಾದರ್ನ್, ವಿಷ್ಣು ಅವರ ಕೈಗಳಿಗೆ ಗಾಯಗಳಾಗಿವೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹಾಸನ, ಚನ್ನರಾಯಪಟ್ಟಣದಿಂದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

ಹಾಸನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ನವೀನ್ ಕುಮಾರ್, ಹೊಳೆನರಸೀಪುರ ಪ್ರಭಾರ ಠಾಣಾಧಿಕಾರಿ ಸೋಮಶೇಖರ್, ಚನ್ನರಾಯಪಟ್ಟಣದ ಪ್ರಭಾರ ಠಾಣಾಧಿಕಾರಿ ದೇವರಾಜ್, ಅಧಿಕಾರಿಗಳಾದ ರೇವಣ್ಣ, ಉಮಾ, ಮಹೇಶ್, ಸತ್ಯನಾರಾಯಣ, ಮರಿಗೌಡ, ಪುಟ್ಟಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net