ಕನ್ನಡ ಸಾರಸ್ವತ ಲೋಕಕ್ಕೆ ಭಾರಿ ನಷ್ಟ

A huge loss to the Kannada Saraswat world
Published on

ವಿಜಯಪುರ : ಸಾಹಿತ್ಯದ ಮೇರು ದಿಗ್ಗಜ ಎಸ್​.ಎಲ್​. ಭೈರಪ್ಪ ಅವರ ಅಗಲಿಕೆಗೆ ಯುವ ಭಾರತ ಸಂಸ್ಥೆ ವತಿಯಿಂದ ಬುಧವಾರ ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಬಳಿ ಸಾಹಿತಿ ಎಸ್​.ಎಲ್​. ಭೈರಪ್ಪ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ಯುವ ಭಾರತ ಸಂಸ್ಥಾಪಕ ಉಮೇಶ ಕಾರಜೋಳ ಮಾತನಾಡಿ, ಕನ್ನಡ ಸಾರಸ್ವತ ಲೋಕದ ಮಹಾನ್​ ದಿಗ್ಗಜ ಡಾ. ಎಸ್​.ಎಲ್​. ಭೈರಪ್ಪನವರ ಅಕಾಲಿಕ ನಿಧನದಿಂದಾಗಿ ನಾವು ಒಬ್ಬ ಶ್ರೇಷ್ಠ ಚಿಂತಕ, ಸಾಹಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಹಲವು ಕಾದಂಬರಿಗಳು ಬೇರೆ ಬೇರೆ ಭಾಷೆಗೆ ಅನುವಾದಗೊಂಡಿದ್ದು, ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ನುಡಿನಮನ ಸಲ್ಲಿಸಿದರು.

ಎಸ್​.ಬಿ. ವಿಸ್ಡಮ್​ ಅಕಾಡೆಮಿಯ ಪ್ರಭುಗೌಡ ಬೋನಾಳ, ಶರಣು ಸಬರದ, ಪ್ರಭುಗೌಡ ಚಿಕ್ಕನಳ್ಳಿ, ಗಣೇಶ ಕುರನಳ್ಳಿ, ವಿನೋದಕುಮಾರ ಮಣೂರ, ಬಸವರಾಜ ಕರಿಕಬ್ಬಿ, ಪ್ರಹ್ಲಾದ ಇಂಗಳಗಿ ಮತ್ತಿತರರಿದ್ದರು.

* ಫೋಟೋ : ಎಂಎಂ 24-&19

ಯುವ ಭಾರತ ಸಂಸ್ಥೆ ವತಿಯಿಂದ ವಿಜಯಪುರದ ಸಿದ್ಧೇಶ್ವರ ದೇವಸ್ಥಾನದ ಬಳಿ ಸಾಹಿತಿ ಎಸ್​.ಎಲ್​. ಭೈರಪ್ಪ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಮೇಶ ಕಾರಜೋಳ, ಪ್ರಭುಗೌಡ ಬೋನಾಳ, ಪ್ರಭುಗೌಡ ಚಿಕ್ಕನಳ್ಳಿ, ಗಣೇಶ ಕುರನಳ್ಳಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net