

ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕು ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ರಾಂಪುರದ ನೀಲಕಂಠೇಶ್ವರ ಮಠದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣದ ವಿಶ್ವ ಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರಿಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ವಿಶ್ವ ಹಿಂದು ಪರಿಷತ್ ಬಜರಂಗದಳದ ತಾಲೂಕು ಅಧ್ಯಕ್ಷ ವಿರೂಪಾಕ್ಷಯ್ಯ ಮಠದ ಮಾತನಾಡಿ, ಸಂಘಟನಾಕಾರರಾಗಿದ್ದ ಕೇಶವ ಹೆಗಡೆ ಅವರ ನಿಧನದಿಂದಾಗಿ ಹಿಂದು ಸಮಾಜಕ್ಕೆ ಅಪಾರ ನಷ್ಟವಾಗಿದ್ದು, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.
ಮಠಮಾನ್ಯಗಳ ಸಂಪರ್ಕ ಸಂಚಾಲಕ ಮಲ್ಲೇಶ ಹೊಸಮನಿ, ಕಾರ್ಯದರ್ಶಿ ಚೇತನ ಕುಂಬಾರ, ತಾಲೂಕು ಬಜರಂಗದಳದ ಗಿರೀಶ ಹಡಪದ, ಶಿವಾನಂದ ಗಾಯಕವಾಡ, ರವಿ ಕೊರ್ತಿ, ಶ್ರೀರಾಮಸೇನೆ ಜಿಲ್ಲಾ ಕಾರ್ಯದರ್ಶಿ ಯಮುನಪ್ಪ ಕೋರಿ, ಕಿರಣ್‌ಕುಮಾರ್ ದೇಸಾಯಿ, ಸಂಜಯ ರಾವಳ, ರಮೇಶ ಸೋನೋನೆ ಇತರರಿದ್ದರು.