ದಾಂಡೇಲಿಯಲ್ಲಿ ಬೃಹತ್ ಉದ್ಯೋಗ ಮೇಳ ಅ. 8ರಂದು

jobs
Published on

ದಾಂಡೇಲಿ: ಇಲ್ಲಿಯ ಸಾಫ್ಟೇಕ್ ಶಿಕ್ಷಣ ಸಂಸ್ಥೆ, ಲಯನ್ಸ್ ಕ್ಲಬ್ ದಾಂಡೇಲಿ ಸಿಟಿ, ರೋಟರಿ ಕ್ಲಬ್, ಈ ನಾಡು ಸಂಸ್ಥೆ ಆಶ್ರಯದಲ್ಲಿ ಅ. 8 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಸಾಫ್ಟೇಕ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸೈಯ್ಯದ್ ತಂಗಳ, ಶಿಬಿರದಲ್ಲಿ ಬೆಂಗಳೂರಿನ ಬಾಷ್ ಹಾಗೂ ಇತರ ಕಂಪನಿಗಳು ಅರ್ಹತೆ ಮೇರೆಗೆ ಆಯ್ಕೆ ಮಾಡಲಿವೆ ಎಂದು ತಿಳಿಸಿದರು. ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಬಿಎ, ಬಿಎಸ್​ಸಿ, ಬಿಸಿಎ, 7ನೇ ತರಗತಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭಾಗವಹಿಸಬಹುದು, ಭಾಗವಹಿಸಲಿಚ್ಛಿಸುವವರು ಸಾಫ್ಟೇಕ್ ಸಂಸ್ಥೆ ಅಥವಾ ಸಾಫ್ಟೇಕನ ಆನ್​ಲೈನ್ ಲಿಂಕ್​ನಲ್ಲಿ ಹೆಸರು ನೋದಾಯಿಸಕೊಳ್ಳಬಹುದು. ಅಲ್ಲದೆ ಅ. 6ರಂದು ಸಾಪ್ಟೇಕ್ ಸಂಸ್ಥೆಯಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅ. 8ರ ಅಂತಿಮ ಸಂದರ್ಶನ ಕುರಿತು ಪೂರ್ವ ತಯಾರಿ ಮಾಹಿತಿ ನೀಡಲಾಗುವುದು ಎಂದರು. ಲಯನ್ಸ್ ಹಿರಿಯ ಸದಸ್ಯ ಯು.ಎಸ್. ಪಾಟೀಲ, ರೋಟರಿ ಅಧ್ಯಕ್ಷ ರಾಹುಲ ಬಾವಾಜಿ, ಕಾರ್ಯದರ್ಶಿ ಅಶುತೋಷ ರಾಯ್, ಹಿರಿಯ ರೋಟರಿ ಸದಸ್ಯ ಎಸ್.ಜಿ. ಬಿರಾದಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net