

ಸಂಕೇಶ್ವರ: ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಆಮೂಲಾಗ್ರ ಕೊಡುಗೆ ನೀಡುವ ಮೂಲಕ ಸಹಕಾರ ರಂಗದ ಶಕ್ತಿ ಹೆಚ್ಚಿಸಿದ್ದವರು ಅಪ್ಪಣಗೌಡ ಪಾಟೀಲ ಎಂದು ರಾಣಿ ಚನ್ನಮ್ಮ ವಿವಿ ಉಪಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.
ಪಟ್ಟಣದ ಎಸ್‌ಡಿವಿಎಸ್ ಸಂಘದ ಎಸ್.ಡಿ. ಪ್ರೌಢಶಾಲೆಯ ಸಭಾಗೃಹದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಪ್ಪಣಗೌಡ ಪಾಟೀಲ ೫೧ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪ್ಪಣಗೌಡ ಪಾಟೀಲ ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ನಿಡಸೋಸಿ ಜಗದ್ಗುರು ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಹಿರಿಯರ ತ್ಯಾಗ, ಸಹಕಾರ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಅಪ್ಪಣಗೌಡ ಪಾಟೀಲ, ಬಸಗೌಡ ಪಾಟೀಲ, ವಿಶ್ವನಾಥ ಕತ್ತಿ ಅವರ ಚಿಂತನೆಗಳು ಸ್ವಾವಲಂಬಿ ಬದುಕಿಗೆ ಆಧಾರವಾಗಿವೆ ಎಂದರು. ಸಾಧಕ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕ ಹಾಗೂ ಸಿಬ್ಬಂದಿಯನ್ನು ಸತ್ಕರಿಸಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಸಿ.ಶಿರಕೋಳಿ, ಆರ್.ಬಿ.ಪಾಟೀಲ, ವಿ.ಬಿ.ತೋಡಕರ, ಡಿ.ಎಸ್.ಪಚಂಡಿ, ಗಜಾನನ ಕ್ವಳ್ಳಿ, ಆಡಳಿತಾಧಿಕಾರಿ ಬಿ.ಎ.ಪೂಜಾರ, ಪ್ರಾಚಾರ್ಯರಾದ ಸಂತೋಷ ತೇರಣಿಮಠ, ಪಿ.ಬಿ.ಬುರ್ಜಿ, ಸರ್ವಮಂಗಳಾ ಯರಗಟ್ಟಿ, ಎಂ.ಐ.ಯಶವಂತ, ಡಾ.ಶಕುಂತಲಾ ಮಡಿವಾಳಪ್ಪಗೋಳ, ಬಿ.ಎಂ.ಹೆಬ್ಬಾಳಿ, ಕಾರ್ಯದರ್ಶಿ ಜಿ.ಸಿ.ಕೋಟಗಿ, ಡಾ.ವಿ.ಡಿ.ನಾಗನೂರಿ ಇತರರಿದ್ದರು.